ತುಮಕೂರು:ಪತ್ನಿಗೆ ಸೀಮಂತ ಕಾರ್ಯ ಮಾಡಿ ತವರು ಮನೆಗೆ ಕಳುಹಿಸಿಕೊಟ್ಟ ಪತಿರಾಯನೊಬ್ಬ ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿರುವ ಘಟನೆ ಶಿರಾ ತಾಲೂಕಿನ ಅಪ್ಪಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಂದ್ರಶೇಖರ್, ಪತ್ನಿ ಬಿಟ್ಟು ಎಸ್ಕೇಪ್ ಆಗಿರುವ ಪತಿರಾಯ. ಪತ್ನಿ ಶೋಭಾಳ ಸೀಮಂತ ಕಾರ್ಯವನ್ನು ಮುಗಿಸಿ, ಆಕೆಯನ್ನು ತವರು ಮನೆಗೆ ಕಳುಹಿಸಿದ ಬಳಿಕ ಕಾಣೆಯಾಗಿದ್ದಾನೆ. ಪತ್ನಿಗೆ ಹರಿಗೆ ಆದಾಗಲೂ ನೋಡಲು ಬಂದಿಲ್ಲ. ಮಗು ಜನಿಸಿ ಹಲುವು ದಿನಗಳು ಕಳೆದರೂ ಆತನ ಸುಳಿವು ಸಿಕ್ಕಿಲ್ಲ. ಇದರಿಂದ ಶೋಭಾ ಆತಂಕಕ್ಕೆ ಒಳಗಾಗಿದ್ದಾರೆ.
ಇತ್ತ ಚಂದ್ರಶೇಖರ್​ ಇಲ್ಲದಿರುವುದರಿಂದ ಅತ್ತೆ ಮತ್ತು ಮಾವ ಕೂಡ ಶೋಭಾಳನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಿಲ್ಲ. ಶೋಭಾ ಮನೆಗೆ ಬಂದ ಕೂಡಲೆ ಮನೆಗೆ ಬೀಗ ಹಾಕಿಕೊಂಡು ಅತ್ತೆ-ಮಾವ ಇಬ್ಬರೂ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ:ದಿಲ್ಲಿಯಲ್ಲಿ ಮತ್ತೆ ಭರ್ಜರಿ ಏರಿಕೆ ಕಂಡ ಟೊಮ್ಯಾಟೊ ಬೆಲೆ; ಸಾರ್ವಕಾಲಿಕ ದಾಖಲೆಯತ್ತ ದರ
ಉಪನ್ಯಾಸಕರಾಗಿರುವ ಚಂದ್ರಶೇಖರ್ ತುಮಕೂರಿನ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಶೋಭಾ ಸಹ ಎಂಟೆಕ್ ಪದವೀಧರೆ. ಪತಿಯನ್ನು ಹುಡುಕಿಕೊಂಡು ಕಾಲೇಜು ಬಳಿ ಮಗುವಿನ ಜತೆ ತೆರಳಿದಾಗ ಇಬ್ಬರನ್ನು ನೋಡಿದರೂ ಮಾತನಾಡದೇ ಕಾಲೇಜಿನಿಂದ ಪತಿ ಹೊರಹೋದರು ಎಂದು ಶೋಭಾ ಹೇಳಿದ್ದಾರೆ. ಅಂದಿನಿಂದ ಮತ್ತೆ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದಿದ್ದಾರೆ.
ಸದ್ಯ 9 ತಿಂಗಳ ಮಗುವಿನೊಂದಿದೆ ಶೋಭಾ ಗಂಡನ ಮನೆ ಮುಂದೆ ಧರಣಿ ಕೂತಿದ್ದಾರೆ. ಶೋಭಾಗೆ ತಂದೆ-ತಾಯಿಯೂ ಸಹ ಸಾಥ್ ನೀಡಿದ್ದಾರೆ. ತನ್ನ ಪತಿ ಸಿಗುವವರೆಗೂ ಧರಣಿ ಕೈಬಿಡಲ್ಲ ಎಂದು ಶೋಭಾ ಹೇಳುತ್ತಿದ್ದಾರೆ. ಈ ಹಿಂದೆ ಶಿರಾ ಪೊಲೀಸ್ ಠಾಣೆಯಲ್ಲಿ ಶೋಭಾ ನಾಪತ್ತೆ ದೂರು ದಾಖಲಿಸಿದ್ದರು. ಅಲ್ಲದೆ, ಮಹಿಳಾ ಸಾಂತ್ವನಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಸಿಗಲಿಲ್ಲ ಎಂದು ಶೋಭಾ ಅಳಲು ತೋಡಿಕೊಂಡಿದ್ದಾರೆ. ಗಂಡನನ್ನು ಹುಡುಕಿಕೊಡಿ ಎಂದು ಶೋಭಾ ಅಂಗಲಾಚಿದ್ದಾರೆ.(ದಿಗ್ವಿಜಯ ನ್ಯೂಸ್​)
ಮರು ಬಿಡುಗಡೆಯಾಗುತ್ತೆ ಹೃತಿಕ್​ ರೋಷನ್​ ಅಭಿನಯದ 20 ವರ್ಷ ಹಳೆ ಸಿನಿಮಾ!

FRIENDSHIP DAY 2023; ಉತ್ತಮ ಸ್ನೇಹಿತರಾಗಲು 6 ​​ಮಾರ್ಗಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 4 =
Remember me
