ತುಮಕೂರು:ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದಂತೆ ಈಗಾಗಲೇ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಶುರು ಮಾಡಿವೆ. ಆದರೆ ತುಮಕೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ‌ವಾಗಿ ಬಿಜೆಪಿ ಸಂಸದರು ಮತಯಾಚಿಸಿ ಅಚ್ಚರಿ ಮೂಡಿಸಿದ್ದಾರೆ.
ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣನಿಗೆ ಮತ ನೀಡುವಂತೆ ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಮತದಾರರಿಗೆ ಮನವಿ ಮಾಡಿದ್ದಾರೆ. ಆ ಮೂಲಕ ರಾಜಣ್ಣನ ಋಣ ತೀರಿಸಲು ಸಂಸದರು ಮುಂದಾಗಿದ್ದಾರೆ.
ಮಧುಗಿರಿ ತಾಲೂಕು ಸುದ್ದೇಕುಂಟೆಯ ವೇಣುಗೋಪಾಲ್ ಸ್ವಾಮಿ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ತುಮಕೂರು ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ ಬಸವರಾಜು ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸಂಸದರು, ನಾನು ಸಂಸದ ಆದ್ಮೇಲೆ ಇದೇ ಮೊದಲ ಬಾರಿಗೆ ಮಧುಗಿರಿಯ ಗಡಿಭಾಗದ ಈ ಊರಿಗೆ ಬಂದಿರುವೆ. ನನ್ನ ಸ್ನೇಹಿತನ ಸಹಕಾರದಿಂದ ನಾನು ಪಾರ್ಲಿಮೆಂಟ್ ಸದಸ್ಯನಾಗಿದ್ದೇನೆಯೇ ಹೊರತು, ನನ್ನ ವೈಯಕ್ತಿಕ ಶಕ್ತಿಯಿಂದಲ್ಲ. ಮಧುಗಿರಿ ಜನರ ಆರ್ಶೀವಾದದಿಂದ ಗೆದ್ದಿದ್ದೇನೆ ಎಂದರು.
ಹಿಂದೆ ನಾನು ಲೋಕಸಭಾ ಚುನಾವಣೆಯಲ್ಲಿ ಸೋತಾಗ ಮಧುಗಿರಿಯಿಂದ 28000 ಮತಗಳು ಬಂದಿದ್ದವು. ಈ ಬಾರಿ 79000 ಮತಗಳು ಬಂದಿವೆ. ಇದಕ್ಕೆ ಕಾರಣ ಕಾರಣ ನನ್ನ ಸ್ನೇಹಿತ ಹಾಗೂ ಈ ಭಾಗದ ಜನರ ಪ್ರೀತಿ-ವಿಶ್ವಾಸ. ರಾಜಣ್ಣರ ಋಣ ತೀರಿಸುವ ಕೆಲಸ ನಾನು ಮಾಡಬೇಕಿದೆ. ಈ ಬಾರಿ ರಾಜಣ್ಣನಿಗೆ ನೀವೆಲ್ಲರೂ ಮತ ಹಾಕಿ. ರಾಜಣ್ಣ ಒಳ್ಳೆಯ ಕೆಲಸಗಾರ, ಕೆಲಸ ಮಾಡುವ ವ್ಯಕ್ತಿಯನ್ನು ಗೆಲ್ಲಿಸಿ. ಯಾವುದೇ ಹಣ ಆಮಿಷಗಳಿಗೆ ಒಳಗಾಗಬೇಡಿ.ಈ ಭಾಗವನ್ನು ಇಬ್ಬರೂ ಸೇರಿ ಮತ್ತಷ್ಟು ಅಭಿವೃದ್ಧಿ ಪಡಿಸುತ್ತೇವೆ ಎಂದು ಬಹಿರಂಗವಾಗಿಯೇ ಸಂಸದರು ಹೇಳಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌರ ವಿರುದ್ಧ ಬಸವರಾಜು ಗೆಲುವು ಸಾಧಿಸಿದ್ದರು.
ಒಡತಿಗಾಗಿ 4 ದಿನ ಆಸ್ಪತ್ರೆಯ ಬಾಗಿಲು ಕಾದ ಪಪ್ಪಿ… ಒಡತಿ ಬದುಕಿ ಬರಲೇ ಇಲ್ಲ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

ಸ್ಯಾಂಟ್ರೋ ರವಿ ‘ಪಿಂಪ್’ ಮಾತ್ರವಲ್ಲ… ಬಗೆದಷ್ಟೂ ಬಯಲಾಗ್ತಿದೆ ಈತನ ಕರಾಳ ಮುಖ…

ಬಿಜೆಪಿಯತ್ತ ಮಾಗಡಿ ಶಾಸಕ ಮಂಜು​ನಾಥ್​? ಯೋಗೇಶ್ವರ್​ ಜತೆ ಮಾತುಕತೆ ನಡೆಸಿದ್ರು… ಎನ್ನುತ್ತಲೇ ಹೊಸ ಬಾಂಬ್​ ಸಿಡಿಸಿದ ಬಾಲಕೃಷ್ಣ

Sign in to your account
Please enter an answer in digits:fifteen + 19 =
Remember me
