ತುಮಕೂರು:ಮದ್ಯಪಾನ ಮಾಡಲೆಂದು ಬಾರ್​ಗೆ ಹೋದ ವ್ಯಕ್ತಿಯನ್ನು ಬಾರ್​ ಎದುರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ. ಇದೀಗ ಕೊಲೆ ಮಾಡಿದ ಆರೋಪಿಗಳು ಪೊಲೀಸರ ವಶವಾಗಿದ್ದಾರೆ.
ಇದನ್ನೂ ಓದಿ:4 ವರ್ಷದ ಮಗುವನ್ನು ಕುಡಗೋಲಿನಿಂದ ಕೊಚ್ಚಿ ಕೊಂದ ದೊಡ್ಡಪ್ಪ! ದೇವಸ್ಥಾನದ ಮುಂದೆ ಹರಿಯಿತು ರಕ್ತದೋಕುಳಿ
ಸುನೀಲ್ ಪ್ರಸಾದ್(೪೦) ಕೊಲೆಯಾದ ದುರ್ದೈವಿ. ಸುನಿಲ್​ನನ್ನು ಜನವರಿ 15ರಂದು ಚಿಲ್ಲೋಟ್ ಬಾರ್ ಎದುರು ತಲೆ ಮೇಲೆ ಸಿಮೆಂಟ್​ ಬ್ಲಾಕ್​ ಎತ್ತಾಕಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಅಘಾತಕಾರಿ ವಿಚಾರ ತಿಳಿದುಬಂದಿದೆ. ಮೃತನ ಪತ್ನಿಯೇ ಗಂಡನ ಕೊಲೆ ಮಾಡಿಸಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ:ಡ್ರ್ಯಾಗನ್​ಫ್ರುಟ್​ ಈಗ ‘ಕಮಲಂಫ್ರುಟ್​’ ಮರುನಾಮಕರಣಕ್ಕೆ ಕಾರಣ ಏನು ಗೊತ್ತಾ?
ಸುನೀಲ್ ಪ್ರಸಾದ್ ಪತ್ನಿ ನಿರ್ಮಲಾ, ರಂಗಯ್ಯ ಹೆಸರಿನ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದು ಗಂಡ ಸುನೀಲ್ ಪ್ರಸಾದ್ ಗಲಾಟೆ ಮಾಡಿದ್ದ. ಅದೇ ಕಾರಣದಿಂದಾಗಿ ನಿರ್ಮಲಾ ಗಂಡನ ಕೊಲೆಗೆ ಸ್ಕೆಚ್​ ಹಾಕಿದ್ದಾಳೆ. ಜನವರಿ 15 ರಂದು ಮದ್ಯಪಾನ ಮಾಡಿ ಬಾರ್ ಹೊರೆಗೆ ನಿಂತಿದ್ದ ಸುನೀಲ್ ಪ್ರಸಾದ್ ಮೇಲೆ ದಾಳಿ ನಡೆಸಲಾಗಿದೆ. ಆತನ ತಲೆಯ ಮೇಲೆ ಸಿಮೆಂಟ್ ಬ್ಲಾಕ್ ಎತ್ತಿಹಾಕಿ ರಂಗಯ್ಯ ಕೊಲೆ ಮಾಡಿದ್ದಾನೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿ ರಂಗಯ್ಯ ಹಾಗೂ ಸುನೀಲ್ ಪತ್ನಿ ನಿರ್ಮಲಳನ್ನು ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್​)
ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

ಗಂಡ ಊರಿನಲ್ಲಿ ಇಲ್ಲದಾಗ ನನ್ನ ಕರೆದು ಏನೇನೋ ಮಾಡಿದಳು- ಈಗ ದಿಕ್ಕೇ ತೋಚದಾಗಿದೆ, ಏನು ಮಾಡಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 18 =
Remember me
