ತುಮಕೂರು:ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮುಂದೆ ಹೀರೋಯಿಸಂ ತೋರಿಸಲು ಹೋದ ಕಾಂಗ್ರೆಸ್ ಮುಖಂಡ ಇದೀಗ ಜೈಲು ಪಾಲಾಗಿದ್ದಾರೆ.
ತುಮಕೂರು ನಗರದ ತಿಲಕ್ ಪಾರ್ಕ್ ಠಾಣೆಯ ಮಹಿಳಾ ಪಿಎಸ್​ಐ ರತ್ನಮ್ಮ ಜೊತೆ ಅಸಭ್ಯ ವರ್ತಿಸಿದ್ದಲ್ಲದೆ, ಅವಾಚ್ಯ ಪದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿಯಲ್ಲಿ ತುಮಕೂರಿನ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು
ಶಶಿ ಹುಲಿಕುಂಟೆ ಅವರು ಎರಡು ದಿನಗಳ ಹಿಂದೆ ತುಮಕೂರು ನಗರದ ಪ್ರಮುಖ ರಸ್ತೆಗಳ ಕಾಪೌಂಡ್ ಗೋಡೆಗಳ ಮೇಲೆ ಶಾಸಕ ಜ್ಯೋತಿ ಗಣೇಶ್ ಭಾವಚಿತ್ರವಿರುವ ಪೇ ಎಂಎಲ್ಎ ಪೋಸ್ಟರ್ ಅಂಟಿಸಿದ್ದರು. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ತಿಲಕ್​ ಪಾರ್ಕ್​ ಪೊಲೀಸರು ವಶಕ್ಕೆ ಪಡೆದಿದ್ದರು.
ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಶಶಿ ಹುಲಿಕುಂಟೆ ಒತ್ತಡ ಹಾಕಿದ್ದರು. ಬಿಡುಗಡೆ ಮಾಡಲು ಒಪ್ಪದಿದ್ದಾಗ ಪೊಲೀಸರ ಜೊತೆ ದರ್ಪದಿಂದ ಮಾತನಾಡಿ, ಅಸಭ್ಯವಾಗಿ ವರ್ತಿಸಿದ್ದರು. ಇನ್ನೂ 3 ತಿಂಗಳ ನಂತರ ನಮ್ಮ ಸರ್ಕಾರ ಬರುತ್ತದೆ. ಆಗ ನಿಮ್ಮನ್ನೆಲ್ಲ ನೋಡಿಕೊಳ್ಳುತ್ತೇನೆ ಎಂದು‌ ಪಿಎಸ್​ಐ ರತ್ನಮ್ಮ ಹಾಗೂ ಪೇದೆಗಳಿಗೆ ಆವಾಜ್ ಹಾಕಿದ್ದರು.
ಇಷ್ಟೇ ಅಲ್ಲದೆ, ಪೇ ಎಂಎಲ್ಎ ಪೋಸ್ಟರ್ ಪ್ರಕರಣದಲ್ಲಿ ಪೊಲೀಸರ ವಶವಾಗಿದ್ದ ನಾಲ್ವರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಠಾಣೆಯಿಂದಲೇ ಶಶಿ ಹುಲಿಕುಂಟೆ ಎಸ್ಕೇಪ್ ಮಾಡಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ತಿಲಕ್​ ಪಾರ್ಕ್​ ಠಾಣಾ ಪೊಲೀಸರು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆ ಹಾಗು ನಾಲ್ವರು ಯುವಕರನ್ನ ಬಂಧಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ವಿಐಎಸ್ಎಲ್ ಕಾರ್ಮಿಕ‌ ಮುಖಂಡರು ಪೊಲೀಸ್​ ವಶಕ್ಕೆ
ಆರೋಪಿ ಶಶಿ ಹುಲಿಕುಂಟೆ ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ‌ ಆಗಿದ್ದಾನೆ. ಸದ್ಯ ಆರೋಪಿಗಳನ್ನ ತುಮಕೂರು 3 ನೇ ಹೆಚ್ಚುವರಿ ಜೆಎಮ್ಎಫ್​ಸಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಯುಕೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ನೈಜೀರಿಯನ್ ಪ್ರಜೆ ಬಂಧನ

ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು

5 ರಿಂದ 15 ವರ್ಷದ ಹೆಣ್ಣುಮಕ್ಕಳ ಅಶ್ಲೀಲ ಫೋಟೋ, ವಿಡಿಯೋಗಳು ಶೇರಿಂಗ್​: ಟೆಕ್ಕಿಗಳು ಸೇರಿ 12 ಮಂದಿ ಅರೆಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 2 =
Remember me
