ತುಮಕೂರು:ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವಳ ಮೇಲೆ ಕಾಂಗ್ರೆಸ್​ ಲೇಡಿ ಲೀಡರ್​ ದರ್ಪ ಮೆರೆದಿರುವ ಘಟನೆ ತುಮಕೂರಿನ ಶ್ರೀರಾಮನಗರದಲ್ಲಿ ನಡೆದಿದೆ.
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಉಪಾಧ್ಯಕ್ಷೆ ಸಾಹೇರಾ ಬಾನು ಮಚ್ಚಿನಿಂದ ಹಲ್ಲೆ ನಡೆಸಿದ್ದಾಳೆ. ಶ್ರೀರಾಮನಗರದ ನಿವಾಸಿ ನಾಜೀಮಾ ಮೇಲೆ ಸಾಹೇರಾ ಮಚ್ಚಿನಿಂದ ಹಲ್ಲೆ ನಡೆಸಿದ್ದಾಳೆ. ವಿದ್ಯುತ್ ಕಂಬ ಅಳವಡಿಸುವ ವಿಚಾರದಲ್ಲಿ ಸಾಹೇರಾ ಹಾಗೂ ನಾಜೀಮಾ ಕುಟುಂಬದ ನಡುವೆ ಗಲಾಟೆ ನಡೆದಿತ್ತು.
ಗಲಾಟೆಯಲ್ಲಿ ತನ್ನ ಪತಿ ಮುಜಿಬ್ ಜೊತೆ ಸೇರಿಕೊಂಡು ನಾಜೀಮಾ ಮೇಲೆ ಸಾಹೇರಾ ಹಲ್ಲೆ ಮಾಡಿದ್ದಾಳೆ. ಕೂಗಿಕೊಂಡರೂ ಬಿಡದೇ ಜುಟ್ಟು ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದು, ನಾಜೀಮಾಳ ತಲೆಗೆ ಗಂಭೀರ ಗಾಯವಾಗಿದೆ. ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಮಗನ ಸಾವಿನ ಬಳಿಕ 28 ವರ್ಷದ ಸೊಸೆಯನ್ನೇ ಮದುವೆಯಾದ 70 ವರ್ಷದ ಮಾವ! ನೆಟ್ಟಿಗರಿಂದ ಭಾರೀ ಟೀಕೆ

ಪ್ರೀತಿಸಿ ಮದ್ವೆಯಾದ ಜೋಡಿಗೆ ಜೀವ ಭಯ: ಊರು ಬಿಟ್ಟು ಅಲೆದಾಡುತ್ತಿರುವ ಪ್ರೇಮಿಗಳಿಗೆ ಬೇಕಿದೆ ಪೊಲೀಸರ ಅಭಯ

ನೆಲಮಂಗಲದ ಪ್ರವಾಸಿ ಮಂದಿರದ ಬಾತ್​ರೂಮ್​ನಲ್ಲಿ ಪಿಡಬ್ಲ್ಯುಡಿ ಅಧಿಕಾರಿ ಸಾವಿಗೆ ಶರಣು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − six =
Remember me
