ತುಮಕೂರು:ಇಂದು ಕಲ್ಪತರು ನಾಡು ತುಮಕೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ತುಮಕೂರಿನ ಜನತೆ ಸಜ್ಜಾಗಿದ್ದಾರೆ. ಎಚ್​ಎಎಲ್​ ತಯಾರಿಕ ಘಟಕ ಉದ್ಘಾಟನೆಗೆ ಬರುವ ಮೋದಿ ಅವರಿಗಾಗಿ ಗುಬ್ಬಿ ಜನತೆಯಿಂದ ವಿಶೇಷ ಹಾರ ಹಾಗೂ ಪೇಟಾ ತಯಾರಿಯಾಗಿದೆ.
ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್‌ನಲ್ಲಿ ಜಗತ್ತಿನ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕಗಳಲ್ಲೊಂದಾದ ಎಚ್‌ಎಎಲ್ ಘಟಕವನ್ನು ಇಂದು ಮಧ್ಯಾಹ್ನ 3.30ಕ್ಕೆ ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದು, ಜಿಲ್ಲೆಯ ಜನತೆಯ ಪರವಾಗಿ ಮೋದಿ ಅವರನ್ನು ವಿಶೇಷವಾಗಿ ಅಭಿನಂದಿಸಲಾಗುತ್ತಿದೆ.
ಮೋದಿ ಅವರು ಜಿಲ್ಲೆಗೆ ಕೊಟ್ಟ ಕೊಡುಗೆಗೆ ನಮ್ಮ ಜಿಲ್ಲೆಯ ವಾಣಿಜ್ಯ ಬೆಳೆಗಳಲ್ಲೊಂದಾದ ಅಡಕೆ ಗೋಟುಗಳಿಂದಲೇ ತಯಾರಿಸಿದ 300 ಗ್ರಾಂ ತೂಕದ ಅಡಕೆ ಪೇಟ ಹಾಗೂ 1.5 ಕೆ.ಜಿ. ತೂಕದ ಗುಂಡು ಅಡಕೆಯಿಂದ ನಿರ್ಮಿಸಿರುವ ಅಡಕೆ ಹಾರದ ಜತೆಗೆ ಶಿವಕುಮಾರ ಶ್ರೀಗಳ ಪತ್ರಿಮೆಯನ್ನು ಮೋದಿ ಅವರಿಗೆ ನೀಡಿ ಗೌರವಿಸಲಾಗುತ್ತದೆ.
ಈ ವಿಶೇಷ ಗೌರವವನ್ನು ಜಿಲ್ಲೆಯ ಜನರ ಪರವಾಗಿ ಜಿಲ್ಲಾಡಳಿತದಿಂದ ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು. ಈ ಅಡಕೆ ಪೇಟ, ಅಡಕೆ ಹಾರವನ್ನು ಗುಬ್ಬಿ ತಾಲೂಕಿನ ಚಿಕ್ಕೋನಹಳ್ಳಿಪಾಳ್ಯದ ನಟರಾಜ್ ನಿರ್ಮಿಸಿದ್ದು ಪ್ರಧಾನಿ ಮೋದಿ ಅವರ ಶಿರವನ್ನು ಅಲಂಕರಿಸಲಿದೆ.
ಸಂಚಾರ ಬದಲಾವಣೆನೂತನ ಹೆಚ್ಎಎಲ್ ತಯಾರಿಕಾ ಘಟಕ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಗುಬ್ಬಿಯಿಂದ ಕೆಬಿ ಕ್ರಾಸ್ ಹಾಗೂ ಕೆಬಿ ಕ್ರಾಸ್​ನಿಂದ ಗುಬ್ಬಿ ಕಡೆಗೆ ಸಂಚರಿಸುವ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಇಂದು ಬೆಳಗ್ಗೆ 6 ರಿಂದ ಸಂಜೆ 7 ಗಂಟೆವರೆಗೆ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಗುಬ್ಬಿ, ನಿಟ್ಟೂರು ಕಡೆಯಿಂದ ಸಂಚರಿಸುವ ವಾಹನಗಳು, ನಿಟ್ಟೂರು, ಟಿಬಿ ಕ್ರಾಸ್, ತುರುವೇಕೆರೆ ಮಾರ್ಗವಾಗಿ ಕೆಬಿ ಕ್ರಾಸ್ ಕಡೆಗೆ ಸಂಚರಿಸಬೇಕು ಮತ್ತು ಕೆಬಿ ಕ್ರಾಸ್ ಕಡೆಯಿಂದ ಬರುವ ವಾಹನಗಳು ಕೆಬಿ ಕ್ರಾಸ್, ತುರುವೇಕೆರೆ, ಟಿಬಿ ಕ್ರಾಸ್ ಮಾರ್ಗವಾಗಿ ನಿಟ್ಟೂರಿಗೆ ಸಂಚರಿಸಬೇಕು. ಮಾರ್ಗ ಬದಲಾವಣೆ ಮಾಡಿ ತುಮಕೂರು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಆದೇಶಿಸಿದ್ದಾರೆ.
ಕಲ್ಪತರು ನಾಡಲ್ಲಿ ಪೊಲೀಸರ ಹದ್ದಿನಕಣ್ಣುತುಮಕೂರಿಗೆ ಮೋದಿ ಆಗಮನ ಹಿನ್ನೆಲೆ ಗುಬ್ಬಿ ಬಳಿ ನಿರ್ಮಾಣವಾಗಿರುವ ಎಚ್​​ಎಎಲ್ ಆವರಣದಲ್ಲಿ . ಎಡಿಜಿಪಿ ನೇತೃತ್ವದಲ್ಲಿ ಪೊಲೀಸ್ ಬಿಗಿಭದ್ರತೆ ಏರ್ಪಡಿಸಲಾಗಿದೆ. ಎಡಿಜಿಪಿ-1, ಐಜಿ- 1, ಎಸ್​ಪಿ -7, ಡಿವೈಎಸ್​ಪಿ- 20, ಪೊಲೀಸ್ ಇನ್ಸ್​ಪೆಕ್ಟರ್​-55, ಪೊಲೀಸ್ ಸಿಬ್ಬಂದಿ-1200, ಸಬ್ ಇನ್ಸ್​ಪೆಕ್ಟರ್​-150, ಹೋಮ್ ಗಾರ್ಡ್ -400, ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿ- 14, ಕೆಎಸ್ಆರ್​ಪಿ ತುಕಡಿ-12 ಸೇರಿದಂತೆ ಒಟ್ಟು 3 ಸಾವಿರ ಪೊಲೀಸರು ಬಿಗಿಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಪಠಾಣ್​ ಸಿನಿಮಾ ಇಷ್ಟ ಆಗಲಿಲ್ಲ ಎಂದ ಮಗುವಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ವೈರಲ್!​

ರಾಜ್ಯದಲ್ಲಿ ಗುಜರಿ ನೀತಿ ಜಾರಿ ಅಧಿಕೃತ ಆರಂಭ: ವಾಹನ ಸ್ಕ್ರ್ಯಾಪಿಂಗ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ; ವಾರ್ಷಿಕ 10 ಕೋಟಿ ವಹಿವಾಟು ಇರೋರಿಗೆ ಅವಕಾಶ

ಇಂದು ತುಮಕೂರಿಗೆ ನಮೋ ಆಗಮನ: ಸಂಚಾರ ಮಾರ್ಗದಲ್ಲಿ ಬದಲಾವಣೆ, ಎಚ್​ಎಎಲ್​ ಬಳಿ ಪೊಲೀಸರ ಹದ್ದಿನಕಣ್ಣು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
