ತುಮಕೂರು:ಮುಂದಿನ ಲೋಕಸಭೆ ಚುನಾವಣೆಯಲ್ಲೂ ನರೇಂದ್ರ ಮೋದಿ ನೇತೃತ್ವದಲ್ಲೇ ಚುನಾವಣೆ ಎದುರಿಸಿ ಮತ್ತೆ ಅವರು ಪ್ರಧಾನಿ ಆಗಬೇಕೆಂಬುದು ನಮ್ಮಲ್ಲೆರ ಅಪೇಕ್ಷೆಯಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಆಗ್ನೇಯ ಪದವೀಧರರ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಶನಿವಾರ ಮಾತನಾಡಿದ ಅವರು, ರಾಜ್ಯದ ಮತದಾರರು ನಮ್ಮ ಜತೆಗೆ ಇದ್ದಾರೆ. ವಿದ್ಯಾವಂತರು, ಸುಶಿಕ್ಷಿತ ಮತದಾರರು ಮೋದಿ ಪರ ಇದ್ದಾರೆ. ಹಾಗಾಗಿ, ಆಗ್ನೇಯ ಪದವೀಧರರು ಇದ್ದಾರೆ ಎಂದರು.
ಆರ್.ಆರ್.ನಗರ ಕ್ಷೇತ್ರದಲ್ಲಿ ಕನಿಷ್ಠ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಶಿರಾ ಉಪಚುನಾವಣೆಯಲ್ಲು ನೂರಕ್ಕೆ ನೂರು ಗೆಲ್ಲುವುದು ನಿಶ್ಚಿತ. ಪರಿಷತ್ ನ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲಿದೆ. ಚುನಾವಣಾ ಫಲಿತಾಂಶವೇ ನನ್ನ ಟೀಕೆ ಮಾಡುವವರಿಗೆ ಉತ್ತರ ಆಗಬೇಕು ಎಂದು ಯಡಿಯೂರಪ್ಪ ಗುಡುಗಿದರು.
ಮುಂದೆ ಯಾವ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಲು ಬಿಡುವುದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಪಕ್ಷ. ಅಧಿಕಾರಕ್ಕೆ ಬರಲಿದೆ ಎಂದು ಯಡಿಯೂರಪ್ಪ ಅವರು ಸಿದ್ದರಾಮಯ್ಯಗೆ ಸವಾಲೆಸದರು.
ಅನ್ನದಾನ, ವಿದ್ಯಾದಾನ ಎರಡರಲ್ಲೂ ಸಿದ್ದಗಂಗೆ ಮಂಚೂಣಿಯಲ್ಲಿದೆ. ದಿ. ಮಲ್ಲಿಕಾರ್ಜುನಯ್ಯ ಪ್ರತಿನಿಧಿಸಿದ್ದ ಈ ಕ್ಷೇತ್ರ ಕೈತಪ್ಪಬಾರದು. ಮೊದಲೇ ಪ್ರಾಶಸ್ತ್ಯ ಮತದಲ್ಲೇ‌ ನಮ್ಮ ಅಭ್ಯರ್ಥಿ ಗೆಲ್ಲಬೇಕು ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nineteen =
Remember me
