ತುಮಕೂರು:ಕಾಣೆಯಾಗಿದ್ದ ಮಗ ಮರಳಿ ಮನೆಗೆ ಬಂದರೆ ಯಾವ ತಂದೆ-ತಾಯಿಗೆ ತಾನೇ ಖುಷಿಯಾಗಲ್ಲ. ಅದರಲ್ಲೂ 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಮರಳಿ ಬಂದರೆ ಪಾಲಕರ ಸಂಭ್ರಮ ಹೇಗಿರುತ್ತದೆ ಎಂಬುದನ್ನು ಅಂದಾಜು ಸಹ ಮಾಡಲಾಗದು. ಆದರೆ, ಈ ಸ್ಟೋರಿಯಲ್ಲಿ ಆಗಿದ್ದೆಲ್ಲಾ ಉಲ್ಟಾಪಲ್ಟಾ.
ಇದನ್ನೂ ಓದಿ:VIDEO| ಹೊಸ ವೇಷದಲ್ಲಿ ಮರಳಿದ ಕಣ್ಸನ್ನೆ ಬೆಡಗಿ ಇನ್​ಸ್ಟಾಗ್ರಾಂನಿಂದ ಕಾಣೆಯಾಗಿದ್ದಕ್ಕೆ ಕಾರಣ ಬಿಚ್ಚಿಟ್ರು!
ಕಾಣೆಯಾದ ಮಗ 10 ವರ್ಷದ ನಂತರ ಪತ್ತೆಯಾದರೂ ತಂದೆ-ತಾಯಿ ಮಾತ್ರ ಆತನನ್ನು ಮನೆಗೆ ಬಿಟ್ಟುಕೊಳ್ಳಲಿಲ್ಲ. ಹೀಗೊಂದು ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗುನ್ನಾಗೆರೆ ಗ್ರಾಮದಲ್ಲಿ ನಡೆದಿದೆ. ಅಯ್ಯೋ ಇವರೆಂಥ ತಂದೆ-ತಾಯಿ ಎಂದು ಟೀಕಿಸುವ ಮುನ್ನ ಒಮ್ಮೆ ಪೂರ್ತಿ ಓದಿದರೆ ಒಳ್ಳೆಯದು.
ಕೃಷ್ಣಪ್ಪ ಎನ್ನುವವರ ಮಗ ರಂಗಸ್ವಾಮಿ 10 ವರ್ಷದ ಹಿಂದೆ ಶಾಲೆಗೆಂದು ಹೋಗಿದಾಗ ನಾಪತ್ತೆಯಾಗಿದ್ದ. ಊರಿಗೆ ಮರಳಲಾರದೇ ಬೀದರ್ ಜಿಲ್ಲೆಯ ಬಾಲ್ಕಿಯಲ್ಲಿ ರಂಗಸ್ವಾಮಿ ಕೆಲಸ ಮಾಡಿಕೊಂಡಿದ್ದ. ಲಾಕ್​ಡೌನ್​ನಿಂದ ಕೆಲಸ ಇಲ್ಲದೇ ಗುನ್ನಾಗೆರೆ ಗ್ರಾಮಕ್ಕೆ ಶುಕ್ರವಾರ ಆಗಮಸಿದ್ದ.
ಇದನ್ನೂ ಓದಿ:ಚಿಕಿತ್ಸೆ ನೀಡುತ್ತಾ ಕರೊನಾ ಸೋಂಕಿಗೆ ಒಳಗಾಗಿ ಚರ್ಮದ ಬಣ್ಣವೇ ಕಪ್ಪಾಗಿದ್ದ ಚೀನಾ ವೈದ್ಯ ಮೃತ
ಇತ್ತ ಮಗ ಮರಳಿ ಬಂದ ಸಂತೋಷವಿದ್ದರೂ ಮನೆಯೊಳಗೆ ಸೇರಿಸಿಕೊಳ್ಳದೇ ಮಹಾಮಾರಿ ಕರೊನಾ ವೈರಸ್​ ಭೀತಿಯಿಂದ ಸಂಬಂಧಿಸಿದವರಿಗೆ ಮಾಹಿತಿ ನೀಡಿ ತಂದೆ-ತಾಯಿಯೇ ರಂಗಸ್ವಾಮಿಯನ್ನು ಕ್ವಾರಂಟೈನ್​ಗೆ ಕಳುಹಿಸಿದ್ದಾರೆ. ಸದ್ಯ ರಂಗಸ್ವಾಮಿ ಹುಲಿಯೂರು ದುರ್ಗದ ಹೇಮಗಿರಿಬೆಟ್ಟದ ವಸತಿ ಶಾಲೆಯಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ. ಡೆಡ್ಲಿ ಕರೊನಾ ಎಷ್ಟೆಲ್ಲಾ ಭೀತಿ ಸೃಷ್ಟಿಸಿದೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ.(ದಿಗ್ವಿಜಯ ನ್ಯೂಸ್​)
ಯುವತಿ ಹೆಸರಿನಲ್ಲಿ ಟೆಕ್ಕಿಗೆ ವಂಚಿಸಲು ಕತೆ ಕಟ್ಟಿದ ತಾಯಿಗೆ ಮಗನೇ ಡೈರೆಕ್ಟರ್​…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 10 =
Remember me
