ತುಮಕೂರು:ನಮ್ಮ ಅಭ್ಯರ್ಥಿ ಯುವ ಎತ್ತು. ಏಳು ಸಾರಿ ಗೆದ್ದಿರುವ ಜಯಚಂದ್ರ ಮುದಿ ಎತ್ತು ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಲೇವಡಿ ಮಾಡಿದರು.
ಶಿರಾದಲ್ಲಿ ಬೈಎಲೆಕ್ಷನ್ ಪ್ರಚಾರಕ್ಕೆ ಮುನ್ನ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಯುವಕ. ಆತ ಯುವ ಎತ್ತು ಎಂದರು.
ಹಿಂದೂಳಿದ ವರ್ಗಗಳಿಗೆ ಆರ್ಥಿಕ ನೆರವು ನೀಡಿದ್ದು ಯಡಿಯೂರಪ್ಪ. ಹಿಂದೂಳಿದ ರಾಜ್ಯಕೀಯ ಪ್ರಾತಿನಿಧ್ಯತೆ ನೀಡಿದ್ದು ಯಡಿಯೂರಪ್ಪ, ಸಿದ್ದರಾಮಯ್ಯ ಅಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಮಧ್ಯರಾತ್ರಿ ಫೋನ್​ ಸಂಭಾಷಣೆ, ಮರುದಿನವೇ ನಡೆಯಿತು ಯುವತಿ ಹತ್ಯೆ: ಕಾರಣ ಬಿಚ್ಚಿಟ್ಟ ಆರೋಪಿ
ಬಿಜೆಪಿಯವರು ಒಂದು ಮೀಸಲಾತಿ ನೀಡಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಕೊಟ್ಟಿದ್ದು ಯಾರು ಸಿದ್ದರಾಮಯ್ಯನವರೆ ಎಂದು ಪ್ರಶ್ನಿಸಿದರು. ಬಿಜೆಪಿ ಮಂತ್ರ ಅಭಿವೃದ್ದಿ ಮಂತ್ರ. ನಮ್ಮ ಅಭ್ಯರ್ಥಿಗೆ ಗೆದ್ದರೆ ಈ ಕ್ಷೇತ್ರ ಅಭಿವೃದ್ದಿಯಾಗಲಿದೆ. ರಾಜಾಹುಲಿ ಮರಿ ವಿಜಯೇಂದ್ರ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಜಯೇಂದ್ರ ಹಾಗೂ ಇತರೆ ಮುಖಂಡರ ನೇತೃತ್ವದಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಪಕ್ಷ ಗೆಲ್ಲುವುದು ನಿಶ್ಚಿತ ಎಂದರು.
ಡಿಕೆಶಿ- ಸಿದ್ದರಾಮಯ್ಯ ನವರ ವೈಯಕ್ತಿಕ ದ್ವೇಷದಿಂದ ಆಡಳಿತ ಕಳೆದುಕೊಂಡರು. ಸರ್ಕಾರ ಕಳೆದುಕೊಂಡು ಒಂದು ವರ್ಷ ಕಳೆದರು ಅವರ ಅಸಮಧಾನ ಕಡಿಮೆಯಾಗಿಲ್ಲ ಎಂದು ಕಾಂಗ್ರೆಸ್ ಒಳಜಗಳದ ಬಗ್ಗೆ ತಿವಿದರು.
ಜೆಡಿಎಸ್- ಕಾಂಗ್ರೆಸ್ ಬಳಿ ಅಭಿವೃದ್ಧಿ ಮಂತ್ರವಿಲ್ಲ. ಇನ್ನು ಮೂರು ವರ್ಷ ಏನು ಮಾಡಲಾಗದ ನಿಶಕ್ತ ಪಕ್ಷಗಳು ಅಭ್ಯರ್ಥಿಗಳನ್ನು ಏತಕ್ಕೆ ನಿಲ್ಲಿಸಿದರು. ಅವರಿಗೆ ಮುಜಗರವಾಗಲಿಲ್ಲವೇ ಎಂದರು ಛೇಡಿಸಿದರು.
‘ಗೋ ಕರೊನಾ…’ ಎಂದ್ರೂ ಬಿಡಲಿಲ್ಲ ಸೋಂಕು; ಆಸ್ಪತ್ರೆಗೆ ದಾಖಲಾದ ಕೇಂದ್ರ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 10 =
Remember me
