ತುಮಕೂರು:ಲೋಕ ಸಮರ ಹೊಸ್ತಿನಲ್ಲಿ ತುಮಕೂರಿನಲ್ಲಿ ಜೋರಾಗಿದೆ ಆಪರೇಷನ್ ಸದ್ದು. ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸಿದ್ದು, ಇದೀಗ ತುಮಕೂರಿಗೆ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠರಾದ ದೇವೆಗೌಡರು ತುಮಕೂರಿಗೆ ಭೇಟಿ ಕೊಟ್ಟ ಬೆನ್ನಲ್ಲೇ ಕೈ ನಾಯಕರು ಅಲರ್ಟ್​ ಆಗಿದ್ದಾರೆ.
ಇದನ್ನೂ ಓದಿ:ಶ್ರೀ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ ಮತ್ತು ಯಾದವ ಸಮುದಾಯ ಭವನ ಉದ್ಘಾಟನೆ
ನಿನ್ನೆ‌ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಎಚ್​. ನಿಂಗಪ್ಪ ಮನೆಗೆ ಎಚ್​.ಡಿ. ದೇವೇಗೌಡರು ಭೇಟಿ ನೀಡಿ, ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂದಿದ್ದು, ಈ ಹಿನ್ನೆಲೆ ದಳಪತಿಗಳಿಗೆ ಶಾಕ್ ಕೊಡಲು ಮುಂದಾದ ಕೈ ನಾಯಕರು ರಿವರ್ಸ್ ಆಪರೇಷನ್ ಅಸ್ತ್ರ ಬಳಸಿದ್ದಾರೆ. ತುಮಕೂರು ‌ನಗರದ ಜೆಡಿಎಸ್​ ಮುಖಂಡ ಗೋವಿಂದರಾಜುಗೆ ಗಾಳ ಕಾಂಗ್ರೆಸ್​ ನಾಯಕರು ಗಾಳ ಹಾಕಿದ್ದಾರೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಪರಾರ್ಜಿತ ಅಭ್ಯರ್ಥಿ ಗೋವಿಂದರಾಜು ಜತೆಗೆ ಸಹಕಾರ ಸಚಿವ ಕೆಎನ್.ರಾಜಣ್ಣ ಮನೆಯಲ್ಲಿ ಗೌಪ್ಯ ಸಭೆ ನಡೆಸಿದ್ದು, ಪಕ್ಷ ಕೈಬಿಡುವಂತೆ ತಿಳಿಸಿದ್ದಾರೆ. ಕೆ.ಎನ್. ರಾಜಣ್ಣ ಹಾಗೂ ಪರಮೇಶ್ವರ್ ನೇತೃತ್ವದಲ್ಲಿ ಮಿಟಿಂಗ್ ಆಗಿದ್ದು, ಸಭೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಸಭೆಯಲ್ಲಿ ಸಚಿವ ಕೆ.ಎನ್ ರಾಜಣ್ಣ, ಪರಮೇಶ್ವರ್, ಶಾಸಕ ಎಸ್.ಆರ್ ಶ್ರೀ ನಿವಾಸ್, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಜೆಡಿಎಸ್​ ಮುಖಂಡ ಗೋವಿಂದರಾಜು ಭಾಗಿಯಾಗಿದ್ದರು. ತೆನೆ ಇಳಿಸಿ ಕೈ ಹಿಡಿತಾರಾ ಜೆಡಿಎಸ್​ ಮುಖಂಡ? ಎಂಬುದು ಸದ್ಯಕ್ಕೆ ಪ್ರಶ್ನೆಯಾಗಿ ಉಳಿದಿದೆ.
ಈ ದೇವಸ್ಥಾನದಲ್ಲಿ ದೇವರಿಗೆ ಮದ್ಯ ನೈವೇದ್ಯ! ಇಲ್ಲಿನ ಭಕ್ತರಿಗೆ ಇದೇ ತೀರ್ಥ ಪ್ರಸಾದ

ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:5 × 5 =
Remember me
