
ಬೆಂಗಳೂರು:ತುಂಗಭದ್ರಾ ಡ್ಯಾಂನ 19ನೇ ಗೇಟ್‌ಗೆ 4 ಅಡಿ ಎತ್ತರದ 5 ತಡೆ ಗೇಟುಗಳ ಯಶಸ್ವಿ ಅಳವಡಿಸಿದ್ದಕ್ಕೆರಾಜ್ಯದ ಜನತೆ, ರೈತರ ಪರವಾಗಿ ಕನ್ನಯ್ಯ ನಾಯ್ಡು ಮತ್ತು ಅಧಿಕಾರಿಗಳು, ಎಂಜಿನಿಯರ್‌ಗಳು, ಸಿಬ್ಬಂದಿ, ಕಾರ್ಮಿಕರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಧನ್ಯವಾದ ಸಲ್ಲಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೇಟ್ ಚೈನ್ ಲಿಂಕ್ ತುಂಡಾಗಿ ಹೋಗಿದ್ದರಿಂದ ಸುಮಾರು 35 ಟಿಎಂಸಿ ನೀರು ಕಳೆದುಕೊಳ್ಳಬೇಕಾಗಿ ಬಂದಿದ್ದು ನೋವಿನ ಸಂಗತಿ ಎಂದರು.ಹರಿಯುವ ನೀರಿನ ನಡುವೆ ಹೇಗೆ ಗೇಟ್ ಅಳವಡಿಕೆ ಮಾಡುತ್ತಾರೆ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರು. ನಮಗೂ ಇಷ್ಟು ಬೇಗ ಗೇಟ್ ಅಳವಡಿಸುತ್ತೇವೆ ಎನ್ನುವ ವಿಶ್ವಾಸ ಇರಲಿಲ್ಲ. ನಮ್ಮ ನಿರೀಕ್ಷೆ ಮೀರಿ ಬೇಗನೆ ಕೆಲಸ ಮಾಡಿದ ಇಡೀ ತಂಡಕ್ಕೆ ನಾಡು ಚಿರಋಣಿಯಾಗಿದೆ ಎಂದರು.ಡ್ಯಾಂ ಗೇಟ್ ಡಿಸೈನ್ ಇದ್ದ ಕಾರಣ ಎಲ್ಲವೂ ಬೇಗ ಸಾಧ್ಯವಾಯಿತು. ತುರ್ತಾಗಿ ಗೇಟ್ ಸಿದ್ದಪಡಿಸಿದ ಜೆಎಸ್‌ಡಬ್ಲೂೃ, ಹಿಂದೂಸ್ಥಾನ್ ಇಂಜಿನೀಯರಿಂಗ್, ನಾರಾಯಣ ಇಂಜಿನೀಯರಿಂಗ್ ಅವರಿಗೂ ಧನ್ಯವಾದ ಎಂದರು.ತುಂಗಭದ್ರ ಡ್ಯಾಂಗೆ ಈಗಲೂ 65 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ಒಳ್ಳೆಯದಾಗುವ ಭರವಸೆ ಇದೆ ಎಂದರು.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:8 − five =
Remember me
