ಹಾವೇರಿ:ಎತ್ತಿಬಂಡಿಯಲ್ಲಿ ಹೋಗುತ್ತಿದ್ದ ಯುವಕರಿಬ್ಬರು ತುಂಗಭದ್ರಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮೂಕ ಪ್ರಾಣಿಗಳೂ ನೀರುಪಾಲಾದ ಹೃದಯವಿದ್ರಾವಕ ಘಟನೆ ರಾಣೆಬೆನ್ನೂರು ತಾಲೂಕಿನಲ್ಲಿ ಸಂಭವಿಸಿದೆ.
ರಾಣೆಬೆನ್ನೂರು ತಾಲೂಕಿನ ಅರೇಮಲ್ಲಾಪೂರ ಗ್ರಾಮದ ಜಗಪ್ಪ ಮತ್ತು ಬೆಟ್ಟಪ್ಪ ಎಂಬ ಯುವಕರು ಸೋಮವಾರ ಬೆಳಗಿನ ಜಾವ ಮರಳು ತುಂಬಲೆಂದು ಎತ್ತಿನ ಗಾಡಿಯಲ್ಲಿ ಹೋಗಿದ್ದರು. ಕೋಣನತಂಬಗಿ ಗ್ರಾಮದ ಬಳಿ ಏಕಾಏಕಿ ನದಿ ನೀರು ರಭಸವಾಗಿ ಹರಿದು ಬಂದಿದೆ. ರಕ್ಷಣೆಗಾಗಿ ಚೀರಾಡುತ್ತಲೇ ಎರಡು ಎತ್ತುಗಳ ಜತೆಗೆ ಈ ಯುವಕರೂ ಕೊಚ್ಚಿಕೊಂಡು ಹೋಗಿದ್ದಾರೆ.ಇದನ್ನೂ ಓದಿರಿಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!
ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಯುವಕರಿಗಾಗಿ ಶೋಧಕಾರ್ಯ ಮುಂದುವರಿಸಿದರು. ಮಧ್ಯಾಹ್ನ 1 ಗಂಟೆಯಾದರೂ ನೀರಲ್ಲಿ ಕೊಚ್ಚಿಹೋದವರ ಸುಳಿವು ಪತ್ತೆಯಾಗಿರಲಿಲ್ಲ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು ಕರ್ನಾಟಕ ಅರ್ಧಭಾಗ ನೆರೆ ಭೀತಿಯಲ್ಲಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಜನರ ಬದುಕು ಮೂರಾಬಟ್ಟೆಯಾಗಿದೆ. ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು, ಪ್ರವಾಹ ಭೀತಿ ಆವರಿಸಿದೆ. ನದಿ ಪಾತ್ರದ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಕೃಷಿ ಜಮೀನು ಜಲಾವೃತವಾಗಿದೆ. ಇನ್ನು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಬಹುತೇಕ ಸೇತುವೆಗಳ ಸಂಪರ್ಕ ಕಡಿತವಾಗಿದ್ದು, ಅಲ್ಲಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್​ ಆಗಿದೆ.
ಹೆಚ್ಚಿದ ಮಳೆಗೆ ಕಳೆಗುಂದಿದ ಬೆಳೆ

ಸಂಬಳ ಕೇಳಿದ್ದಕ್ಕೆ ಬಿಯರ್ ಬಾಟಲಿಯಿಂದ ಚುಚ್ಚಿ-ಚುಚ್ಚಿ ಕೊಂದೇ ಬಿಟ್ಟರು!

ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು… ಮಳೆಯಲ್ಲೇ ಬೃಹತ್​ ಪ್ರತಿಭಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
