ಕಂಪ್ಲಿ (ಹೊಸಪೇಟೆ):ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಶಾಲೆ ಬಿಟ್ಟ (ಹತ್ತನೇ ತರಗತಿ) 17 ವರ್ಷದ ಬಾಲಕನೊಬ್ಬ ಮಹಿಳೆಯೊಬ್ಬಳ ಮಧ್ಯಸ್ಥಿಕೆಯಲ್ಲಿ ಮುತ್ತು ಕಟ್ಟಿಸಿಕೊಂಡು ಮಂಗಳಮುಖಿ ಆಗಲು ಹೊರಟಿದ್ದ.
ಶುಕ್ರವಾರ(ಜೂ.12) ನಡೆಯಬೇಕಿದ್ದ ಈ ಕಾರ್ಯಕ್ರಮಕ್ಕಾಗಿ ಸಾರ್ವಜನಿಕರಿಂದ 3,700 ರೂ. ಕಾಣಿಕೆಯನ್ನೂ ಬಾಲಕ ಸಂಗ್ರಹಿಸಿದ್ದ. ಹುಲಿಗೆಮ್ಮನ ಭಕ್ತನಾಗಿ, ಹೆಣ್ಣುಮಕ್ಕಳಂತೆ ಉದ್ದನೆ ಕೂದಲು ಬಿಟ್ಟಿದ್ದ ಬಾಲಕನ ಜತೆ ಮದ್ಯವ್ಯಸನಿ ಅಜ್ಜಿ ಮಾತ್ರ ಇದ್ದಾರೆ. ಗ್ರಾಮಸ್ಥರು ಈತನನ್ನು ಚುಡಾಯಿಸುತ್ತಿದ್ದರು. ಹಾಗಾಗಿ ಮಹಿಳೆಯೊಬ್ಬಳ ಮಧ್ಯಸ್ಥಿಕೆಯಲ್ಲಿ ಮಂಗಳಮುಖಿ ಆಗಲು ಹೊರಟಿದ್ದವನ ಬದುಕಲ್ಲಿ ಆತ ನಿರೀಕ್ಷಿಸಿಯೇ ಇರದ ತಿರುವು ಸಿಕ್ಕಿದೆ.
ಇದನ್ನೂ ಓದಿರಿvideo/ ಮಳೆ ಸುರಿಯುತ್ತಿದ್ದರೂ ಪೊಲೀಸ್​ ಠಾಣೆ ಎದುರಲ್ಲೇ ಧರಣಿ ಕುಳಿತ ಮಹಿಳೆ, ಕ್ಯಾರೆ ಎನ್ನದ ಸಿಬ್ಬಂದಿ…
ಮಂಗಳಮುಖಿ ಆಗಲು ಸಿದ್ಧತೆ ನಡೆಸಿರುವ ವಿಷಯ ತಿಳಿಯುತ್ತಿದ್ದಂತೆ ಕುರುಗೋಡು ಪೇದೆ ಮಹಾಂತೇಶ್​, ಗ್ರಾಮಲೆಕ್ಕಿಗ ಹೊನ್ನಪ್ಪ, ಪಿಡಿಒ ತಾರಾನಾಯ್ಕ, ಮಕ್ಕಳ ಸಹಾಯವಾಣಿ ತಾಲೂಕು ಸಂಯೋಜಕರಾದ ಚಿದಾನಂದ, ನೇತ್ರಾ ಸೇರಿ ಅಧಿಕಾರಿಗಳ ತಂಡ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಮುತ್ತು ಕಟ್ಟಿಸಿಕೊಳ್ಳಲಿದ್ದ ಬಾಲಕನ ಮನವೊಲಿಸಿದೆ.
ಸಹಜ ಜೀವನ ನಡೆಸುವಂತೆ ಪ್ರೇರೇಪಿಸಿದ ತಂಡವು ಬಾಲಕನ ಉದ್ದನೆ ಕೇಶ ತೆಗೆಸಿದೆ. ಗ್ರಾಪಂ ಸದಸ್ಯ ಜಡೆಪ್ಪ ಸಮ್ಮುಖದಲ್ಲಿ ನೆರೆಹೊರೆಯವರ ಸಭೆ ನಡೆಸಿ ತಿಳಿವಳಿಕೆ ಮೂಡಿಸಿತು.
ಇದನ್ನೂ ಓದಿರಿರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 13 =
Remember me
