| ವಿಲಾಸ ಮೇಲಗಿರಿಬೆಂಗಳೂರುತಿಂಗಳಿಗೆ ಲಕ್ಷಾಂತರ ರೂ. ಸಂಬಳ ಪಡೆದರೂ, ಚಾಚೂ ತಪ್ಪದೆ ಆದಾಯ ತೆರಿಗೆ ಪಾವತಿಸುತ್ತಿದ್ದರೂ ಗೃಹಬಳಕೆಗೆ ಟಿವಿ, ಫ್ರಿಜ್​ನಂತಹ ವಸ್ತು ಕೊಳ್ಳುವುದಕ್ಕೂ ಸಂಕಷ್ಟ! ಹೌದು. ಇದು ರಾಜ್ಯದ ಪ್ರಾಧ್ಯಾ ಪಕರ ಗೋಳು. ರಾಜ್ಯಾದ್ಯಂತ 430 ಪದವಿ ಕಾಲೇಜುಗಳಲ್ಲಿ ಸುಮಾರು 6700 ಪ್ರಾಧ್ಯಾಪಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯುಜಿಸಿ ನಿಯಮದ ಪ್ರಕಾರ ತಿಂಗಳಿಗೆ 1.5 ರಿಂದ 2.25 ಲಕ್ಷ ರೂ.ವರೆಗೆ ಸಂಬಳ ಪಡೆಯುತ್ತಾರೆ. ಆದರೆ, ಇವರು ಸಣ್ಣ ವಸ್ತು ಖರೀದಿಸುವುದಕ್ಕೂ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿರುವುದೇ ಸಮಸ್ಯೆಯ ಮೂಲ. ಏಕೆಂದರೆ, ಸರ್ಕಾರದ ಅನುಮತಿ ಸಿಗುವುದು ಅಷ್ಟು ಸುಲಭವಲ್ಲ. ಹತ್ತಾರು ಬಾರಿ ಆಯುಕ್ತರ ಕಚೇರಿಯಿಂದ ಬೆಂಗಳೂರಿನ ಬಹುಮಹಡಿ (ಎಂಎಸ್ ಬಿಲ್ಡಿಂಗ್) ಕಟ್ಟಡದಲ್ಲಿರುವ ಕಚೇರಿಗಳಿಗೆ ಸುತ್ತಬೇಕು. ನೌಕರರೆಲ್ಲರ ಕೈ ಬಿಸಿ ಮಾಡಬೇಕು. ಈ ಪೂರ್ವಾನುಮತಿ ಸಹವಾಸವೇ ಬೇಡ ಎಂದು ಖರೀದಿಸಿದರೆ ಮೆಮೋ, ಶಿಸ್ತುಕ್ರಮ ಎದುರಾಗುವುದು ನಿಶ್ಚಿತ. ಇದೇ ಕಾರಣ ಮುಂದಿಟ್ಟುಕೊಂಡು ವಾರ್ಷಿಕ ವೇತನ ಬಡ್ತಿಯಂ ತಹ ಸವಲತ್ತಿಗೂ ಅಡ್ಡಿ ಎದುರಾಗುತ್ತದೆ.
ವಿಲೇವಾರಿ ನಿರ್ಲಕ್ಷ್ಯ:ಹಳೆಯ ನಿಯಮಗಳನ್ನೇ ಕಾಲೇಜು ಶಿಕ್ಷಣ ಇಲಾಖೆ ಈಗಲೂ ಮುಂದುವರಿಸಿರುವುದರಿಂದ ಪ್ರಾಧ್ಯಾಪಕರು ಪ್ರಯಾಸಪಡಬೇಕಿದೆ. ಪ್ರಸ್ತುತ 500-600 ಆಸ್ತಿ ಖರೀದಿ ಪ್ರಸ್ತಾವನೆಗಳು ವಿಲೇವಾರಿಯಾಗದೆ ಕಚೇರಿಯಲ್ಲೇ ಧೂಳು ಹಿಡಿಯುತ್ತಿವೆ. ಈ ಪೈಕಿ ಕೆಲವು ಕಡತಗಳು 6-7 ವರ್ಷ ಹಳೆಯವು ಎಂಬುದು ಗಮನಾರ್ಹ.
ಸಮಸ್ಯೆ ಏನು?:ಅನೇಕರು ಆಸ್ತಿ ಖರೀದಿಗೆ ಅನುಮೋದನೆ ಕೋರುತ್ತಾರೆ. ಇನ್ನೊಂದೆಡೆ ಆಸ್ತಿ ಖರೀದಿಗೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಒಪ್ಪಂದದ ಗಡುವು ಮುಗಿದರೆ, ಕೊಟ್ಟ ಮುಂಗಡ ಹಣ ವಾಪಸ್ ಬರುವುದಿಲ್ಲ. ಹಾಗಾಗಿ ಅನುಮತಿ ಬರದೇ ಇದ್ದರೂ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ. ಆದರೆ, ಇಂತಹ ಪ್ರಕರಣಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡುತ್ತಿದೆ. ಇದು ಪ್ರಾಧ್ಯಾಪಕರಿಗೆ ಕಿರಿಕಿರಿಯಾಗಿದೆ.
ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತರಾಗಿದ್ದ ಅನಿರುದ್ಧ ಶ್ರವಣ್ ಅವರು, ಅನುಮತಿಗೆ ಬರೆದೂ ಕೊಡದೇ ಇದ್ದ ಸಂದರ್ಭದಲ್ಲಿ ಅದು ಇಲಾಖೆಯ ತಪ್ಪಾಗುತ್ತದೆ. ಹಾಗಾಗಿ ಬಾಕಿ ಇರುವ ಎಲ್ಲ ಪ್ರಕರಣಗಳಿಗೆ ಘಟನೋತ್ತರ ಅನುಮತಿ ನೀಡುವಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಅದು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ.
ಏನಿದು ನಿಯಮ?:ಕರ್ನಾಟಕ ನಾಗರಿಕ ಸೇವೆಗಳ ನಡತೆ ನಿಯಮದಡಿ 10 ಸಾವಿರ ರೂ.ಗಿಂತ ಹೆಚ್ಚು ಮೊತ್ತದ ಯಾವುದೇ ವಸ್ತುಗಳ ಖರೀದಿಸುವ ಮುನ್ನ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ. ಇದು ಬಹಳ ಹಳೆಯ ನಿಯಮ.
ಟೇಕ್ ಹೋಮ್ ತಗಾದೆ:ಕೆಜಿಐಡಿ, ಪಿಎಫ್, ಸಾಲದ ಕಂತು…ಹೀಗೆ ಎಲ್ಲ ಕಟಾವು ಕಳೆದು ನೌಕರರು ಟೇಕ್ ಹೋಮ್ ಸಂಬಳ ಶೇ.50 ಇರಬೇಕೆಂಬ ನಿಯಮವಿದೆ. ಇದರಲ್ಲಿ ಸ್ವಲ್ಪ ಆಚೀಚೆ ಆದರೂ ಅನುಮತಿ ಸಿಗುವುದಿಲ್ಲ. ಒಂದು ವೇಳೆ ಈ ನಿಯಮ ಮೀರಿ ಖರೀದಿ ಪ್ರಕ್ರಿಯೆ ನೆರವೇರಿದ್ದರೆ ನೋಟಿಸ್ ಗ್ಯಾರಂಟಿ!
ಏನು ಸುಧಾರಣೆ ಆಗಬೇಕು?
ಸರ್ಕಾರಕ್ಕೆ ಹೆದರಿ ಸಾಲ:ಅನೇಕ ಪ್ರಾಧ್ಯಾಪಕರು ಅನುಮತಿ ನೀಡಿಕೆಯ ನಿಬಂಧನೆಗಳಿಂದ ಕೈತುಂಬ ಕಾಸಿದ್ದರೂ ಸಾಲದ ಮೊರೆ ಹೋಗಬೇಕಿದೆ. ಆ ಸಾಲಕ್ಕೆ ಬಡ್ಡಿ ತೆರಬೇಕಿದೆ. ಅದಕ್ಕಾಗಿ ನೂರೊಂದು ದಾಖಲೆ ಸೃಷ್ಟಿಸುವ ಪಡಿಪಾಟಲು ಪ್ರಾಧ್ಯಾಪಕರದ್ದಾಗಿದೆ.
ಕಳ್ಳದಾರಿ:ಸರ್ಕಾರದ ನೂರೊಂದು ನಿಯಮಗಳಿಂದ ಪಾರಾಗಲು ಅನೇಕರು ಪತ್ನಿ, ಅಣ್ಣ, ತಮ್ಮ, ಬಂಧು-ಬಳಗದವರ ಹೆಸರಿನಲ್ಲಿ ಆಸ್ತಿ ಖರೀದಿ ಮಾಡುವುದೂ ಉಂಟು.
ಸರ್ಕಾರ ಆಸ್ತಿ ಖರೀದಿ ಪೂರ್ವಾನುಮತಿ ನಿಯಮಗಳನ್ನು ಪರಿಷ್ಕರಿಸಬೇಕು. ತೆರಿಗೆ ಪಾವತಿಸಿದ ಹಣದಲ್ಲಿ ಯಾವುದೇ ಖರೀದಿಗೆ ನಿರ್ಬಂಧ ವಿಧಿಸಬಾರದು. ಪ್ರಸ್ತಾವನೆಗಳ ವಿಲೇವಾರಿಗೆ ಕಾಲಮಿತಿ ನಿಗದಿಪಡಿಸಬೇಕು.|ಡಾ.ಎಚ್.ಜಿ.ನಾರಾಯಣಪ್ರಧಾನ ಕಾರ್ಯದರ್ಶಿ, ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ
ಅಣ್ಣ-ತಮ್ಮನಿಂದ ನಿರಂತರ ಅತ್ಯಾಚಾರ: ಲವ್ ಜಿಹಾದ್​ಗೆ ಸಿಲುಕಿ ನರಳಾಡುತ್ತಿದ್ದಾಳೆ ಬೆಂಗಳೂರಿನ ಯುವತಿ

ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 3 =
Remember me
