ತುಮಕೂರು:ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದವನಿಗೆ ದಂಡ ಹಾಕಿದ್ದ ಪೊಲೀಸರ ಮೇಲೆ ಸಿಟ್ಟಿಗೆದ್ದ ದುಷ್ಕರ್ಮಿಯೊಬ್ಬ ಠಾಣೆ ಬಳಿಯಿದ್ದ ಪೇದೆಯ ಬೈಕ್​ ಅನ್ನೇ ಕದ್ದಿದ್ದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಇತ್ತೀಚಿಗೆ ಸಂಭವಿಸಿತ್ತು. ಇಂತಹದ್ದೇ ಮತ್ತೊಂದು ಪ್ರಕರಣ ತುಮಕೂರಿನಲ್ಲೂ ಸಂಭವಿಸಿದ್ದು, ಇದು ದಂಡದ ವಿಚಾರವಾಗಿ ಅಲ್ಲ!
ಇತ್ತೀಚಿಗಷ್ಟೇ ಮನೆಗಳ್ಳನೊಬ್ಬ ತುಮಕೂರು ಗ್ರಾಮಾಂತರ ಪೊಲೀಸ್​ ಠಾಣೆಯ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಟಿವಿ ಕಳವು ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಿಪಿಐ ಕಚೇರಿಯಲ್ಲಿ ರಾತ್ರಿ ವೇಳೆ ಯಾವುದೇ ಸಿಬ್ಬಂದಿ ಇರುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳ, ರಾತ್ರೋರಾತ್ರಿ ಕಚೇರಿಯ ಬಾಗಿಲು ಮುರಿದು ಟಿವಿ ಹೊತ್ತೊಯ್ದಿದ್ದಾನೆ. ಸಿಪಿಐ ಕಚೇರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿದೆ. ಸಿಪಿಐ ಕಚೇರಿಯಲ್ಲಿ ಸಿಸಿಟಿವಿ ಕೂಡ ಇಲ್ಲ.ಇದನ್ನೂ ಓದಿರಿಪ್ರಭಾವಿ ನಾಯಕರಿಗೆ ಅನುಶ್ರೀ ಫೋನ್​ ಕಾಲ್​: ಮಾಜಿ ಸಿಎಂ ಎಚ್​ಡಿಕೆ ಕೆಂಡಾಮಂಡಲ
ಸಿಪಿಐ ಕಚೇರಿಯಲ್ಲಿ ಟಿವಿ ಕದ್ದಿದ್ದ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಾರೇಹಳ್ಳಿಯ ಮಂಜುನಾಥ್​ ಅಲಿಯಾಸ್​ ಕಳ್ಳ ಮಂಜನನ್ನು ನಗರ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ. ಬೇರೆಬೇರೆ ಆರೋಪಿಗಳಿಂದ ಜಪ್ತಿ ಮಾಡಿದ್ದ ಆಭರಣಗಳನ್ನು ವಾರಸುದಾರರಿಗೆ ಇತ್ತೀಚೆಗೆ ವಾಪಸ್​ ನೀಡಲಾಗಿತ್ತು. ಇದನ್ನು ಕಳ್ಳಮಂಜ, ಕಚೇರಿಯಲ್ಲಿ ಮತ್ತಷ್ಟು ಆಭರಣಗಳು ಇವೆ ಎಂದು ಕಳವಿಗೆ ಮುಂದಾಗಿದ್ದ ಎನ್ನಲಾಗಿದೆ. ಟಿವಿ ಕಳವಿಗೆ ಸಂಬಂಧಿಸಿದಂತೆ ನಗರ ಠಾಣೆಗೆ ಗ್ರಾಮಾಂತರ ಠಾಣೆ ಸಿಪಿಐ ಶೇಷಾದ್ರಿ ದೂರು ನೀಡಿದ್ದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತನ ವಿರುದ್ಧ ಎನ್​ಇಪಿಎಸ್​ ಠಾಣೆಯಲ್ಲಿ 15 ಕಳವು ಪ್ರಕರಣಗಳಿವೆ.
‘ಅನುಶ್ರೀ ಅರೆಸ್ಟ್​ ಆಗದಂತೆ ತಡೆದಿರೋದು ಶುಗರ್​ ಡ್ಯಾಡಿ!’

ಮಾಸ್ಕ್​ ಹಾಕಿಲ್ಲವೆಂದು ದಂಡ ವಿಧಿಸಿದ್ದಕ್ಕೆ ಪೊಲೀಸರ ಗತಿ ಏನಾಯ್ತು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + twenty =
Remember me
