ಬೆಂಗಳೂರು: ಕರೊನಾ COVID 19 ಸೋಂಕು ಹೆಚ್ಚುತ್ತಿರುವ ಕಾರಣ ಬೆಂಗಳೂರಿನ ಪಾದರಾಯನಪುರ ವಾರ್ಡ್ ಸೀಲ್​ಡೌನ್ ಘೋಷಿಸಿದ್ದಾಗ್ಯೂ ಅಲ್ಲಿನ ಜನ ಭಾನುವಾರ ರಾತ್ರಿ ಕರೊನಾ ವಾರಿಯರ್ಸ್ ಜತೆಗೆ ಗಲಾಟೆ ಮಾಡಿಕೊಂಡದ್ದೀಗ ಎಲ್ಲರ ಗಮನಸೆಳೆದಿದೆ. ಸಾಮಾಜಿಕ ತಾಣಗಳಲ್ಲೂ ಈ ವಿಷಯ ಚರ್ಚೆಯಲ್ಲಿದ್ದು, ಶಾಸಕ ಜಮೀರ್​ ಅಹಮದ್ ಟ್ವೀಟ್​ಗೆ ಪ್ರತಿಕ್ರಿಯೆಯಾಗಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅಪ್ಡೇಟ್ ಮಾಡಿದ ಟ್ವೀಟ್​ ಚರ್ಚೆಯ ಕಾವನ್ನು ಇನ್ನಷ್ಟು ಹೆಚ್ಚಿಸಿದೆ.
ಶಾಸಕ ಜಮೀರ್ ಅಹಮದ್​ ಅವರು ಟ್ವೀಟ್​​ನಲ್ಲಿ ಪಾದರಾಯನಪುರ ನಿವಾಸಿಗಳಿಗೆ ಬಿಬಿಎಂಪಿಯ ಲಾಕ್​ಡೌನ್ ನಿಯಮ ಪಾಲಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೂ ಮೊದಲೇ ಶಾಸಕ ರೇಣುಕಾಚಾರ್ಯ ಅವರು ಬೆಂಗಳೂರಿನ ಪಾದರಾಯಪುರದಲ್ಲಿ #Covid_19 ಬಗ್ಗೆ ಅರಿವು ಮೂಡಿಸಲು ಹೋದ ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳು ಹಾಗೂ ಕಾರ್ಯನಿರತ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವ ಒಂದು ಕೋಮಿನ ಕೆಲವು ದೇಶದ್ರೋಹಿಗಳನ್ನು ಕೂಡಲೇ ಬಂಧಿಸಿ ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸ ಬೇಕೆಂದು ಒತ್ತಾಯಿಸಿದ್ದರು.
ಇದರ ಬೆನ್ನಿಗೆ, ಶಾಸಕ ಜಮೀರ್ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, #Covid19 ವೈರಾಣು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವವರ ಮೇಲೆ ಹಲ್ಲೆ ಮಾಡಿದ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಂಡ ನಿಮ್ಮಂತವರೇ ಪರೋಕ್ಷವಾಗಿ ಈ ಘಟನೆಗಳಿಗೆ ಕಾರಣ, ನಿಮಗೆ ತಾಕತ್ತಿದ್ದರೆ ಕರ್ತವ್ಯಕ್ಕೆ ಅಡ್ಡಿ ಪಡಿಸುವವರನ್ನು ಗಲ್ಲಿಗೇರಿಸಿ ಎಂದು ಮುಖ್ಯಮಂತ್ರಿಗಳಿಗೆ ಬೆಳಗ್ಗೆ ಮನವಿ ಮಾಡಿ ಎಂದು ಸವಾಲು ಹಾಕಿದ್ದಾರೆ.
ಇನ್ನೊಂದು ಟ್ವೀಟ್​ನಲ್ಲಿ ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆಯ ಪೆಟ್ಟು, ಜಿಹಾದಿಗಳಿಗೆ ಎನ್ಕೌಂಟರ್ ಬೆಸ್ಟು. ನಮ್ಮನ್ನು ಕೋಮುವಾದಿಗಳು ಎಂದರೂ ಪರವಾಗಿಲ್ಲ, ನಮ್ಮ ಜನರ ಭದ್ರತೆಗೆ ಅಪಾಯ ಒಡ್ಡುವ, ದೇಶದ ಕಾನೂನನ್ನು ಗೌರವಿಸದ ಜಿಹಾದಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇನೆ. ನಮಗೆ ನಮ್ಮ ಜನರ ಆರೋಗ್ಯವೇ ಮುಖ್ಯ ಎಂದು ರೇಣುಕಾಚಾರ್ಯ ಅವರು ಹೇಳಿಕೊಂಡಿದ್ದಾರೆ.
ದೇಶವೆ ಕೊರೊನದಿಂದ ನಲುಗುತ್ತಿರುವ ಸಂದರ್ಭದಲ್ಲಿ ಈ ಅಮಾನವೀಯ ಘಟನೆ ತೀವ್ರ ಖಂಡನೀಯ. ಪಾದರಾಯನಪುರದಲ್ಲಿ 144 ಸೆಕ್ಷನ್ ಜಾರಿಯಿದ್ದರು ಅವರೆಲ್ಲರು ಗುಂಪಾಗಿ ಸೇರಿ ಅಶಾಂತಿ ವಾತಾವರಣ ಸೃಷ್ಟಿಸಿದ್ದಾರೆ. ಅವರನ್ನು ಬಂಧಿಸಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ರೇಣುಕಾಚಾರ್ಯ, ಅಧಿಕಾರಿಗಳೆ ಧೈರ್ಯದಿಂದಿರಿ ನಿಮ್ಮ ಜತೆಗೆ ಯಡಿಯೂರಪ್ಪ ಅವರ ಸರ್ಕಾರವಿದೆ ಎಂದು ಸಮಾಧಾನವನ್ನೂ ಹೇಳಿದ್ದಾರೆ.
ಕರೊನಾ ವಾರಿಯರ್ಸ್ ವಿರುದ್ಧ ಪಾದರಾಯನಪುರ ನಿವಾಸಿಗಳ ಗಲಾಟೆ: 50ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್​ಗೆ ಕರೆದೊಯ್ಯುವಾಗ ಪುಂಡಾಟ

ಡೆಡ್ಲಿ ಶೂಟ್​ಔಟ್​ಗೆ 16 ಜನ ಬಲಿ: 30 ವರ್ಷಗಳ ಅವಧಿಯಲ್ಲೇ ಅತಿ ಭೀಕರ ಹತ್ಯಾಕಾಂಡ

ಶಕ್ತಿಶಾಲಿ ಭೂಕಂಪ- 6.1 ಮ್ಯಾಗ್ನಿಟ್ಯೂಡ್​ ಕಂಪನ ದಾಖಲಾಯಿತು ಜಪಾನ್​ ಸಮೀಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + ten =
Remember me
