ಬಳ್ಳಾರಿ:ಪಟ್ಟಣದ ಹೊರ ವಲಯದಲ್ಲಿ ಸೋಮವಾರ (ಫೆ.10) ಸಂಭವಿಸಿದ ಕಾರು ಅಪಘಾತವೀಗ ಈಗ ಟ್ವಿಸ್ಟ್ ಪಡೆದಿದೆ. ಪ್ರಭಾವಿ ಸಚಿವರೊಬ್ಬರ ಪುತ್ರ ಈ ಕಾರ್​ನಲ್ಲಿದ್ದು, ಈತನನ್ನು ಕಾಪಾಡುವ ಸಲುವಾಗಿ ಕಾರ್ ಹೆಸರನ್ನೇ ಬದಲಿಸಲಾಗಿದೆ. ಅಲ್ಲದೆ, ಮತ್ತೊಂದು ಕಾರ್ ಮೂಲಕ ಸ್ಥಳದಿಂದ ಕರೆದೊಯ್ಯಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಅಂದು ಮಧ್ಯಾಹ್ನ ಕಾರು ಡಿಕ್ಕಿಯಾಗಿ ಹೆದ್ದಾರಿ ಪಕ್ಕ ನಿಂತಿದ್ದ ಸ್ಥಳೀಯ ಬಾಲಕ ರವಿನಾಯ್ಕ ಮೃತಪಟ್ಟಿದ್ದ. ಕಾರ್​ನಲ್ಲಿದ್ದ ಮತ್ತು ಪ್ರಭಾವಿ ಸಚಿವರೊಬ್ಬರ ಕಡೆಯವರಾದ ಸಚಿನ್ ಎಂಬುವರು ಮೃತಪಟ್ಟಿದ್ದರು. ಎಫ್​ಐಆರ್ ಪ್ರಕಾರ ಕಾರ್​ನಲ್ಲಿದ್ದ ಸಚಿನ್, ರಾಕೇಶ, ಶಿವಕುಮಾರ, ರಾಹುಲ್ ಹಾಗೂ ವರುಣ್​ಗೆ ಗಾಯಗಳಾಗಿದ್ದವು. ಮಾರ್ಗಮಧ್ಯ ಸಚಿನ್ ಮೃತಪಟ್ಟಿದ್ದ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ವ್ಯಕ್ತಿ ಸೇರಿ ನಾಲ್ವರ ಹೆಸರು ನೋಂದಾಯಿಸಲಾಗಿದೆ. ಬೆಂಜ್ ಕಂಪನಿಯ ಕಾರ್ ಆಗಿದ್ದರೂ ಅದನ್ನು ಆಡಿ ಎಂದು
ಎಫ್​ಐಆರ್​ನಲ್ಲಿ ದಾಖಲಿಸಿರುವ ಪೊಲೀಸರು, ಸಚಿವರ ಮಗನನ್ನು ರಕ್ಷಿಸಲು ಕಸರತ್ತು ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಒಟ್ಟು ಎರಡು ಕಾರ್​ನಲ್ಲಿ ಹಂಪಿ ವೀಕ್ಷಿಸಿ ವಾಪಸ್ ತೆರಳುವಾಗ ಅಪಘಾತ ಸಂಭವಿಸಿದೆ. ಕಾರ್ ಪಲ್ಟಿಯಾದ ಕೂಡಲೆ ಇದರಲ್ಲಿದ್ದ ಒಬ್ಬರನ್ನು ಹಿಂಬದಿಯಲ್ಲಿದ್ದ ಕಾರ್​ನಲ್ಲಿ ಕರೆದುಕೊಂಡು ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು, ಇಂಟಲಿಜೆನ್ಸಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಕಾರು ಅಪಘಾತದಲ್ಲಿ ಗಾಯಗೊಂಡವರನ್ನು ಮಧ್ಯಾಹ್ನ ನಾಲ್ಕು ಗಂಟೆಗೆ ಆಸ್ಪತ್ರೆಗೆ ಕರೆತರಲಾಗಿತ್ತು. ಸಚಿನ್ ಮೃತಪಟ್ಟಿದ್ದ. ರಾಕೇಶ್​ಗೆ ಬೆನ್ನು ಮುರಿದಿತ್ತು. ಗಾಯಗೊಂಡ ಇಬ್ಬರಿಗೆ ಚಿಕಿತ್ಸೆ ನೀಡಲಾಗಿಯಿತು. ವರುಣ್​ಗೆ ಗಾಯಗಳಾಗಿರಲಿಲ್ಲ. ಮೃತ ವ್ಯಕ್ತಿ ಸಚಿವರೊಬ್ಬರ ಕಡೆಯವರು ಎಂದು ಮರಿಯಮ್ಮನಹಳ್ಳಿ ಪೊಲೀಸ್ ಅಧಿಕಾರಿ ಹೇಳಿ, ಬೇಗನೆ ಪೋಸ್ಟ್ ಮಾರ್ಟಮ್ ಮಾಡಲು ಕೋರಿದ್ದರು. ರಾತ್ರಿ ವೇಳೆ ಪೋಸ್ಟ್​ಮಾರ್ಟಮ್ ಮಾಡದಿದ್ದರೂ ಮಾನವೀಯತೆ ದೃಷ್ಟಿಯಿಂದ ಪೋಸ್ಟ್ ಮಾರ್ಟಮ್ ಮಾಡಲಾಗಿದೆ.
| ಡಾ.ಎಚ್.ಮಹಂತೇಶವೈದ್ಯ, ನೂರು ಹಾಸಿಗೆ ಆಸ್ಪತ್ರೆ, ಹೊಸಪೇಟೆ
ಪ್ರಕರಣ ಸಂಬಂಧ ಎಫ್​ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅಪಘಾತವಾದ ಕಾರಿಗೂ ಹಾಗೂ ಅದು ನೋಂದಣಿ ಆಗಿರುವ ಸಂಸ್ಥೆಗೂ ನಮಗೂ ಸಂಬಂಧವಿಲ್ಲ. ಎಫ್​ಐಆರ್​ನಲ್ಲಿ ನನ್ನ ಮಗನ ಹೆಸರಿಲ್ಲ. ಕಾರಿನಲ್ಲಿ ನನ್ನ ಮಗನಿದ್ದ ಎಂಬ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
| ಆರ್.ಅಶೋಕ್ ಕಂದಾಯ ಸಚಿವ
ಅಪಘಾತವಾದ ಕಾರಿನಲ್ಲಿ ಯಾವುದೇ ಸಚಿವರ ಪುತ್ರ ಇರಲಿಲ್ಲ. ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಮರ್ಸಿಡೀಸ್ ಬೆಂಜ್ ಕಾರು ಅಪಘಾತವಾಗಿ ರವಿನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಸಚಿನ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಉಳಿದವರು ಚಿಕಿತ್ಸೆ ಪಡೆದು ಬೆಂಗಳೂರಿಗೆ ತೆರಳಿದ್ದಾರೆ. ಕಾರು ಚಾಲಕ ರಾಹುಲ್ ವಿರುದ್ಧ ಪ್ರಕರಣ ದಾಖಲಾಗಿದೆ. ತಪ್ಪು ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ.
| ಸಿ.ಕೆ.ಬಾಬಾ ಬಳ್ಳಾರಿ ಎಸ್ಪಿ
ಬಳ್ಳಾರಿ ಕಾರು ಅಪಘಾತದಲ್ಲಿ ಇಬ್ಬರು ಅಮಾಯಕರು ಮರಣ ಹೊಂದಿದ್ದಾರೆ. ಅಪಘಾತ ಮಾಡಿದ ಪ್ರಭಾವಿ ವ್ಯಕ್ತಿಯನ್ನು ರಕ್ಷಿಸಲು ಕರ್ನಾಟಕ ಬಿಜೆಪಿ ಮತ್ತು ಯಡಿಯೂರಪ್ಪ ಸರ್ಕಾರದಿಂದ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಸಲ್ಲದು. ಸತ್ಯ ಮತ್ತು ನ್ಯಾಯ ಗೆಲ್ಲಲಿ.
| ಕರ್ನಾಟಕ ಕಾಂಗ್ರೆಸ್ ಟ್ವೀಟ್
ಸಚಿವನ ಮಗನೇ ಇರಲಿ, ಸಿಎಂ ಪುತ್ರನೇ ಆಗಲಿ. ಅವರ ಬೇಜಾವ್ದಾರಿಗೆ ಬಡವರು ಬಲಿಯಾಗುವುದು ಯಾವ ನ್ಯಾಯ ? ರಸ್ತೆ ಬದಿಯಲ್ಲಿ ನಿಂತಿದ್ದ ನನ್ನ ಮೊಮ್ಮಗನ ಸಾವಿನ ತನಿಖೆ ಪಾರದರ್ಶಕವಾಗಬೇಕು.
| ಸೀತಾಬಾಯಿ ಮೃತ ರವಿನಾಯ್್ಕ ಅಜ್ಜಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eighteen =
Remember me
