ಬೆಂಗಳೂರು :ಬಿಬಿಎಂಪಿ ಸ್ವಯಂಸೇವಕರೆಂದು ಸುಳ್ಳು ಹೇಳಿ ಕರೊನಾ ರೋಗದಿಂದ ಮೃತಪಟ್ಟವರ ಶವ ಸುಡಲು ಹಣ ಪಡೆಯುತ್ತಿದ್ದ ಇಬ್ಬರನ್ನು ನಗರದ ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ. ನಗರದ ನಿವಾಸಿ ಶಿವಾಂತ(24) ಮತ್ತು ಸೆಲ್ವ ಮೀನಲ್(25) ಬಂಧಿತರು.
ಶಿವಂತ ಹಾಗೂ ಸೆಲ್ವ ಮೀನಲ್ ಬಿಬಿಎಂಪಿಯಲ್ಲಿ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳುತ್ತಿದ್ದರು. ನಂತರ ಕರೊನಾದಿಂದ ಮೃತಪಟ್ಟವರ ಸಂಬಂಧಿಕರನ್ನು ಸಂಪರ್ಕಿಸಿ ಶವವನ್ನು ಸುಡುತ್ತೇವೆ. ಇದಕ್ಕೆ 12 ಸಾವಿರ ರೂ. ಕೊಡುವಂತೆ ಬೇಡಿಕೆ ಇಡುತ್ತಿದ್ದರು. ಬಿಬಿಎಂಪಿ ಸ್ವಯಂ ಸೇವಕರಾದರೆ ಉಚಿತವಾಗಿ ಸೇವೆ ಸಲ್ಲಿಸಬೇಕು ಎಂಬ ನಿಯಮವಿದೆ. ಆದರೆ, ಆರೋಪಿಗಳು ಹಣ ಸಂಪಾದಿಸುವ ಉದ್ದೇಶದಿಂದ ಕೃತ್ಯ ಎಸಗುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ದೇಶದ ಮುಕ್ಕಾಲು ಭಾಗ ಕರೊನಾ ಕೇಸುಗಳು ಈ 10 ರಾಜ್ಯಗಳಲ್ಲಿವೆ !
ಆರೋಪಿಗಳು ಹೊಸಪಾಳ್ಯದಲ್ಲಿರುವ ಬಿಬಿಎಂಪಿ ವಿದ್ಯುತ್ ಚಿತಾಗಾರದಲ್ಲಿ ಮೇ 6 ರಂದು ಸಂಜೆ ಕರೊನಾದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಸುಡುವುದಾಗಿ ಹೇಳಿ ಅವರ ಸಂಬಂಧಿಕರಿಂದ 12 ಸಾವಿರ ರೂ. ಪಡೆದಿದ್ದರು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮಹೇಶ್ ಕೊಟ್ಟ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಿದ್ದಾರೆ.
ಲಸಿಕೆ ಪಡೆಯಲು ಹೋದ ಆಟೋ ಡ್ರೈವರ್​… ಮನೆಗೆ ವಾಪಸಾದಾಗ ಅಲ್ಮೆರಾ ಖಾಲಿ !

ಎಚ್ಚರಿಕೆ ! ಸತ್ತವರ ಬಟ್ಟೆಯನ್ನೂ ಕದಿಯುವವರಿದ್ದಾರೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 5 =
Remember me
