ಕಲಬುರಗಿ:ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಕಿಂಗ್​ಪಿನ್​ ಆರ್.ಡಿ.ಪಾಟೀಲ್​ಗೆ ಮನೆ ಬಾಡಿಗೆ ನೀಡಿದ ಆರೋಪದ ಮೇಲೆ ಅಪಾರ್ಟ್​ಮೆಂಟ್​ ಮಾಲೀಕ ಸೇರಿದಂತೆ ತನಿಖಾ ತಂಡ ಇಬ್ಬರನ್ನು ವಶಕ್ಕೆ ಪಡೆದಿದೆ.
KEA ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ಆರ್​.ಡಿ. ಪಾಟೀಲ್​ ಹಿನ್ನಲೆ ವಿಚಾರಿಸದೆ ಮನೆ ಬಾಡಿಗೆ ನೀಡಿದ ಆರೋಪದ ಮೇಲೆ ಅಪಾರ್ಟ್​​ಮೆಂಟ್​ ಮಾಲೀಕ ಶಂಕರಗೌಡ ರಾಮಚಂದ್ರ ಯಾಳವಾರ ಸೂಪರ್​ವೈಸರ್​-ಸೆಕ್ಯೂರಿಟಿ ಇನ್​ಚಾರ್ಜ್​ ಆಗಿದ್ದ ದಿಲೀಪ್​ ಪವಾರ ಎಂಬಾತನನ್ನು ಅಫಜಲ್​ಪುರ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಜೈಲಿನಿಂದ 80 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕಿಸ್ತಾನ
KEA ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆರ್​.ಡಿ. ಪಾಟೀಲ್​ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದರೂ ಪೊಲೀಸರಿಗೆ ಮಾಹಿತಿ ನೀಡದೆ ಆರೋಪಿಗಳಿಗೆ ಮನೆ ಬಾಡಿಗೆಗ ಕೊಟ್ಟು ತಲೆಮಾರಿಸಿಕೊಳ್ಳಲು ಸಹಕರಿಸಿದ ಆರೋಪದ ಮೇಲೆ ಅಪಾರ್ಟ್​ಮೆಂಟ್​ ಮಾಲೀಕ ಹಾಗೂ ಸೂಪರ್​ವೈಸರ್​-ಸೆಕ್ಯೂರಿಟಿ ಇನ್​ಚಾರ್ಜ್​ನನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಆರ್​.ಡಿ. ಪಾಟೀಲ್​ ನೆರೆಯ ಮಹಾರಾಷ್ಟ್ರ, ತೆಲಂಗಾಣ ಹಾಗು ಆಂಧ್ರಪ್ರದೇಶದಲ್ಲಿ ತಲೆಮಾರಿಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
