ರಾಯಚೂರು:ಚರಂಡಿ ನಿರ್ಮಾಣಕ್ಕೆ ತೋಡಿದ್ದ ಗುಂಡಿಯಲ್ಲಿ ಬಿದ್ದು ಒಂದೇ ಮನೆಯ ಇಬ್ಬರು ಬಾಲಕರು ಬಲಿಯಾಗಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ. ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಮಾನ್ವಿ ತಾಲೂಕಿನ ಬ್ಯಾಗವಾಟ್ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಬ್ಯಾಗವಾಟ್ ಗ್ರಾಮದ ಅಜಯ್ (8) ಹಾಗೂ ಸುರೇಶ (6) ಸಾವಿಗೀಡಾದ ಬಾಲಕರು. ಇವರಿಬ್ಬರೂ ಒಂದೇ ಮನೆಯ ಅಂದರೆ ಅಣ್ಣ-ತಮ್ಮಂದಿರ ಮಕ್ಕಳು. ಸಂಜೆ ಆಟವಾಡಲು ಹೊರಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಚರಂಡಿ ಕಾಮಗಾರಿಗಾಗಿ ಈ ಗುಂಡಿ ತೋಡಲಾಗಿದ್ದು, ಅದಾಗಿ ಎರಡು-ಮೂರು ತಿಂಗಳು ಕಳೆದರೂ ಗುಂಡಿಯನ್ನು ಮುಚ್ಚಿಸಿರಲಿಲ್ಲ. ಗುಂಡಿ ಮುಚ್ಚದ ಕಾರಣ ಚರಂಡಿಯಲ್ಲಿ ನೀರು ಸಂಗ್ರಹವಾಗಿತ್ತು. ಶಾಲೆಯ ಪಕ್ಕದಲ್ಲೇ ಈ ಗುಂಡಿ ಇದ್ದು, ಆಟವಾಡಲು ಹೋಗಿದ್ದ ಈ ಬಾಲಕರಿಬ್ಬರೂ ಗುಂಡಿಯನ್ನು ಗಮನಿಸದೇ ಕಾಲು ಜಾರಿ ಒಳಕ್ಕೆ ಬಿದ್ದಿದ್ದರು. ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಸ್ಥಳೀಯರು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 4 =
Remember me
