ವಿಜಯಪುರ:ಒಂದೇ ಪಕ್ಷದ ಇಬ್ಬರು ಎಂಎಲ್​​​ಎಗಳ ಸಹೋದರರು ಮಾರಾಮಾರಿ ಹಂತಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಇಬ್ಬರೂ ಕಾಂಗ್ರೆಸ್​​ ಶಾಸಕರ ಸಹೋದರರೇ. ಒಬ್ಬ ಕಾಂಗ್ರೆಸ್​​​​ ಪಕ್ಷದ ಶಾಸಕ ಎಂ.ಬಿ. ಪಾಟೀಲ್ ಸಹೋದರ,​​​​ ಮತ್ತೊಬ್ಬ ಅದೇ ಕಾಂಗ್ರೆಸ್​​​​ ಪಾರ್ಟಿ ಶಾಸಕ ಶಿವಾನಂದ ಪಾಟೀಲ್​​​​ ಸಹೋದರ.
ಈ ಇಬ್ಬರು ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ತಹಸೀಲ್ದಾರ್​​ ಕಚೇರಿಯ ಮುಂದೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ.
ಇಬ್ಬರ ಗಲಾಟೆಗೆ ಕಾರಣ ಒಂದೇ: ತಳವಾರ ಸಮುದಾಯಕ್ಕೆ ಎಸ್​​.ಟಿ ಸರ್ಟಿಫಿಕೇಟ್ ನೀಡಿದ್ದು ಯಾರು ಎಂಬುದು.​​​ ಎಂ.ಬಿ. ಪಾಟೀಲ್​​​ ಸಹೋದರ ಸುನೀಲ್​​ಗೌಡ ಪಾಟೀಲ್,​​​​​​ ‘ಸಿದ್ದರಾಮಯ್ಯ ಅವಧಿಯಲ್ಲಿ ಎಸ್​​​​ಟಿ ಮೀಸಲಾತಿ ನೀಡಲು ಎಲ್ಲ ಕ್ರಮ ಕೈಗೊಳ್ಳಲಾಗಿತ್ತು..’ ಎಂದು ಹೇಳಿದರು. ಇನ್ನು ಕಾಂಗ್ರೆಸ್​​ ಶಾಸಕ ಶಿವಾನಂದ ಪಾಟೀಲ್​​ ಸಹೋದರ ಮತ್ತು ಬಿಜೆಪಿ ಮುಖಂಡನೂ ಆಗಿರುವ ವಿಜುಗೌಡ ಪಾಟೀಲ್​​​​, ‘ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಮೀಸಲಾತಿ ನೀಡಲಾಗಿರುವುದು, ಇದಕ್ಕೆ ಸಿದ್ದರಾಮಯ್ಯ ಕಾರಣ ಅಲ್ಲವೇ ಅಲ್ಲ..’ ಎಂದು ಪ್ರತಿದಾಳಿ ನಡೆಸಿದರು.
ಸಿದ್ದರಾಮಯ್ಯ ಪರ ವಿಧಾನ ಪರಿಷತ್ ಸದಸ್ಯ ಸುನೀಲ್​​​ಗೌಡ ಪಾಟೀಲ್​​​​ ವಾದ ಮುಂದುವರೆಸಿದಾಗ, ಬೊಮ್ಮಾಯಿ ಪರ ಬಿಜೆಪಿ ಮುಖಂಡ ವಿಜುಗೌಡ ವಾಗ್ಯುದ್ಧ ನಡೆಸಿದರು. ಇವರಿಬ್ಬರ ವಾದ-ಪ್ರತಿವಾದ ಮಾರಾಮಾರಿ ಹಂತಕ್ಕೆ ಹೋಗುವುದನ್ನು ಗಮನಿಸಿದ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್​​​ ಮಧ್ಯೆ ಪ್ರವೇಶಿಸಿ, ಇಬ್ಬರನ್ನೂ ಸಮಾಧಾನ ಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 15 =
Remember me
