ಒಂದೇ ಸಲ ಸಿಕ್ಕವು ಎರಡು ಮೃತ ದೇಹಗಳು
ಬೆಳಗಾವಿ:ಹೆಂಡತಿಯ ನೆನಪಲ್ಲಿ ಗಂಡ ಮತ್ತು ತಾಯಿಯ ನೆನಪಲ್ಲಿ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ  ನಡೆದಿದೆ.
ಚಿತ್ರಲೇಖಾ ಸಫಾರ್, ವಿಜಯ್ ಪವಾರ್ ಮೃತರು. ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಹೊಂಡದಲ್ಲಿ ಎರಡು ಮೃತ ದೇಹಗಳು ತೇಲುತ್ತಿದ್ದವು. ಮೊದಲಿಗೆ ಇದು ಇಬ್ಬರೂ ಸೇರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಭಾಸವಾಗಿದ್ದರೂ ಸಹ ಇಬ್ಬರದ್ದರೂ ಸಹ ಬೇರೆ ಬೇರೆ ಕಾರಣಕ್ಕೆ ಸಾವಾಗಿದೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ:ಸ್ಟಾರ್ ಹೀರೋಯಿನ್ ಬಳಿ ಕ್ಷಮೆ ಕೇಳಿದ ನಟ ರಾಣಾ ದಗ್ಗುಬಾಟಿ
ತಾಯಿ ತೀರಿ ಹೋಗಿದ್ದರಿಂದ ಖಿನ್ನತೆಗೆ ಒಳಗಾಗಿ ಮಾನಸಿಕವಾಗಿ ಅಸ್ವಸ್ಥವಾಗಿದ್ದ ಚಿತ್ರಲೇಖಾ ಸಫಾರ್. ತಾಯಿಯ ನೆನಪಿನಲ್ಲಿಯೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಶಹಾಪುರದ ದಾನೆ ಗಲ್ಲಿಯಲ್ಲಿ ಚಿತ್ರಲೇಖಾ ವಾಸವಿದ್ದರು ಎಂದು ತಿಳಿದು ಬಂದಿದೆ. ಅಲ್ಲದೆ ಸಾವಿನ ಕಾರಣವನ್ನು ಮಾಧ್ಯಮಗಳಿಗೆ ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನು ಬೆಳಗಾವಿಯ ಕಾಂಗಲೇ ಗಲ್ಲಿಯ ನಿವಾಸಿ ವಿಜಯ್ ಪವಾರ್ ತಮ್ಮ‌ ಹೆಂಡತಿ ತೀರಿ ಹೋಗಿದ್ದರಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ವಿಜಯ್ ಪತ್ನಿ ಮೃತಪಟ್ಟಿದ್ದರು.‌ನಿನ್ನೆ ರಾತ್ರಿ ಮನೆ ಬಿಟ್ಟು ಹೋದ ವಿಜಯ್ ಬೆಳಗ್ಗೆ ಕಪಿಲೇಶ್ವರ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ:VIDEO | ಭಾರತದಂತಹ ದೇಶ ಇನ್ನೊಂದಿಲ್ಲ ಎಂದ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್
ಮೃತ ವಿಜಯ್ ಪವಾರಗೆ ಒಬ್ಬ ಪುತ್ರ ಮತ್ತು ಒಬ್ಬಳು ಪುತ್ರಿ ಇದ್ದಾರೆ. ಇಬ್ಬರು ಸಾವನ್ನಪ್ಪಿದ ಸ್ಥಳ ಒಂದೇ ಆಗಿರೊದ್ರಿಂದ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಕುಟುಂಬಸ್ಥರು ಹೇಳುವಂತೆ ಇದು ಆತ್ಮಹತ್ಯೆಯೋ ಅಥವಾ ಬೇರೆ ಏನಾದರೂ ಕಾರಣಗಳಿವೆ ಎಂಬುವುದರ ಕುರಿತು ಪೊಲೀಸರ ತನಿಖೆ ಮುಂದುವರೆಸಿದ್ದಾರೆ.
ಒಟ್ಟಿನಲ್ಲಿ ತಾಯಿ ಹಾಗೂ ಹೆಂಡತಿಯ ಸಂಬಂಧಗಳಿಂದ ದೂರವಾದ ಎರಡು ಮುಗ್ದ ಜೀವಗಳು ಅವರ ನೆನಪಿನಲ್ಲಿಯೇ ಪ್ರಾಣ ಬಿಟ್ಟಿದ್ದು, ನಿಜಕ್ಕೂ ದುರಂತವೇ ಸರಿ. ಆದರೆ ತೀರಿ ಹೋದವರ ನೆನಪಲ್ಲಿ ಈಗ ಮನೆಯವರು ಕೊರಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಟಾರ್ ಹೀರೋಯಿನ್ ಬಳಿ ಕ್ಷಮೆ ಕೇಳಿದ ನಟ ರಾಣಾ ದಗ್ಗುಬಾಟಿ

ೈ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − one =
Remember me
