ಮಂಗಳೂರು:ಅಂತಾರಾಷ್ಟ್ರೀಯ ಸ್ನೇಹಿತರ ದಿನವಾದ ಇಂದೇ ಇಬ್ಬರು ಗೆಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಒಬ್ಬನ ಜೀವ ಉಳಿಸಲೆಂದು ಇನ್ನೊಬ್ಬ ಧಾವಿಸಿದ್ದು, ಕೊನೆಗೆ ಇಬ್ಬರೂ ಸಾವಿಗೀಡಾಗುವಂತಾಗಿದೆ.
ದಕ್ಷಿಣಕ್ನನಡ ಜಿಲ್ಲೆಯ ಮಂಗಳೂರು ಹೊರವಲಯದ ಪಡೀಲ್ ಅಳಪೆ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಅಳಪೆ ನಿವಾಸಿ ವರುಣ್ (27), ಎಕ್ಕೂರು ನಿವಾಸಿ ವೀಕ್ಷಿತ್ (28) ಸಾವಿಗೀಡಾದ ಯುವಕರು. ಇವರಿಬ್ಬರು ಕ್ರಿಕೆಟ್ ಆಡಲೆಂದು ಹೋಗಿದ್ದಾಗ ಈ ಪ್ರಕರಣ ನಡೆದಿದೆ.
ಯುವಕರ ತಂಡ ಕ್ರಿಕೆಟ್ ಆಡಲು ತೆರಳಿದ್ದು, ಆ ಬಳಿಕ ಇವರಿಬ್ಬರು ಹಳ್ಳದ ದಂಡೆಯಲ್ಲಿ ಕುಳಿತಿದ್ದರು. ಹಳ್ಳದ ನೀರಿಗೆ ಇಳಿದಿದ್ದ ವರುಣ್, ಆಯತಪ್ಪಿ ಹಳ್ಳಕ್ಕೇ ಬಿದ್ದಿದ್ದ. ಇದನ್ನು ನೋಡಿದ ವೀಕ್ಷಿತ್ ರಕ್ಷಣೆಗೆ ಧಾವಿಸಿದ್ದಾನೆ. ಆದರೆ ಹಳ್ಳದಲ್ಲಿ ಹೂಳು ತುಂಬಿದ್ದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿ ಸಾವಿಗೀಡಾದರು. ಘಟನೆಯ ಮಾಹಿತಿ ಪಡೆದು ಹಳ್ಳದಲ್ಲಿ ಹುಡುಕಾಟ ನಡೆಸಿದ ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಕೊನೆಗೂ ಇಬ್ಬರ ಶವವನ್ನು ಹಳ್ಳದಿಂದ ಹೊರಕ್ಕೆ ತೆಗೆದಿದ್ದಾರೆ.
ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × five =
Remember me
