ದಾವಣಗೆರೆ:ಗೋಮಾಳವೊಂದರಲ್ಲಿ ದೇವಸ್ಥಾನಕ್ಕಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡವೊಂದನ್ನು ಕೆಡವಿದ್ದಕ್ಕೆ ಎರಡು ಸಮುದಾಯದ ಗುಂಪುಗಳ ನಡುವೆ ಮಾರಾಮಾರಿಯೇ ಉಂಟಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ದೇವಸ್ಥಾನ ಕಟ್ಟಡ ಕೆಡವಿದ ಗ್ರಾಮದ ಒಂದು ಸಮುದಾಯ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಅರೇಹಳ್ಳಿ ಗ್ರಾಮದ ಗೋಮಾಳ ಜಾಗದಲ್ಲಿ ಸೇವಾಲಾಲ್​ ದೇವಸ್ಥಾನ ನಿರ್ಮಾಣ ವಿವಾದದ ಹಿನ್ನೆಲೆಯಲ್ಲಿ ಈ ಗುಂಪುಘರ್ಷಣೆ ಸಂಭವಿಸಿದೆ. ಸೇವಾಲಾಲ್ ಜಯಂತಿ ಹಿನ್ನೆಲೆಯಲ್ಲಿ ಅರೇಹಳ್ಳಿ ಗ್ರಾಮದ ಹೊರವಲಯದ ಗೋಮಾಳ ಜಾಗದಲ್ಲಿ ದೇವಸ್ಥಾನ ಒಂದು ಸಮುದಾಯ ದೇವಸ್ಥಾನ ನಿರ್ಮಾಣ ಮಾಡಲು ಮುಂದಾಗಿತ್ತು.
ಇಂದು ಬೆಳಗ್ಗೆ ದೇವಸ್ಥಾನ ಕಟ್ಟಡದ ಕಾರ್ಯ ಪ್ರಾರಂಭವಾಗಿದ್ದು, ಈ ವಿಷಯ ತಿಳಿದು ಗ್ರಾಮದ ಮತ್ತೊಂದು ಸಮುದಾಯದ ಜನರು ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೇ ಗ್ರಾಮದಲ್ಲಿ ಒಂದು ಸೇವಾಲಾಲ್ ದೇವಸ್ಥಾನವಿದೆ, ಇನ್ನೊಂದು ದೇವಸ್ಥಾನದ ಅವಶ್ಯಕತೆ ಇಲ್ಲ. ಅಲ್ಲಿಯೇ ಜಯಂತಿ ಆಚರಿಸಿ ಎಂದು ಗುಂಪು ಒತ್ತಾಯಿಸಿತು. ಈ ನಡುವೆ 2 ಸಮುದಾಯದ ಮಧ್ಯೆ ಘರ್ಷಣೆ ಉಂಟಾಗಿದ್ದು, ನಿರ್ಮಾಣವಾಗುತ್ತಿದ್ದ ಕಟ್ಟಡವನ್ನು ಕೆಡವಿ ತೆರವುಗೊಳಿಸಲಾಯಿತು.
ದೇವಸ್ಥಾನ ನಿರ್ಮಾಣ ವಿವಾದ; ಎರಡು ಗುಂಪುಗಳ ಮಧ್ಯೆ ಮಾರಾಮಾರಿ..ವಿವರಗಳಿಗೆhttps://t.co/YaFZZbZDD9ನೋಡಿ…pic.twitter.com/nteMcHnaBl
— Vijayavani (@VVani4U)February 16, 2021

ಎರಡು ಸಮುದಾಯದ ನಡುವೆ ಘರ್ಷಣೆ ಉಂಟಾಗಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾದ್ದರಿಂದ ಸ್ಥಳದಲ್ಲಿ ಬಿಗುವಿನ‌ ವಾತಾವರಣ ಕಂಡುಬಂದಿತ್ತು. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ 16 ಜನರ ಮೇಲೆ ಜಾತಿ ನಿಂದನೆ ಮತ್ತು ದೇವಸ್ಥಾನದ ಕಟ್ಟಡ ಕೆಡವಿದ ಕುರಿತು ದೂರು ದಾಖಲಾಗಿದ್ದು, ಸ್ಥಳಕ್ಕೆ ಡಿಸಿ, ಎಸ್​ಪಿ, ಡಿವೈಎಸ್​ಪಿ ಅವರೆಲ್ಲ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜತೆಗೆ ಎರಡೂ ಸಮುದಾಯದ ನಡುವೆ ಶಾಂತಿ ಸಂಧಾನ ಸಭೆ ನಡೆಸಿದ್ದಾರೆ.
ಪೊಲೀಸರು ತೂಕ ಇಳಿಸಿಕೊಂಡು ಫಿಟ್ ಆದ್ರೆ ಮಾತ್ರ ಇವೆಲ್ಲ ಸಿಗುತ್ತವೆ, ಇಲ್ದಿದ್ರೆ ಇಲ್ಲ!

ನಟ-ನಿರ್ಮಾಪಕ ರಾಘವೇಂದ್ರ ರಾಜ್​ಕುಮಾರ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
