ಕಲಬುರಗಿ:ಎರಡು ತಲೆ ಅಥವಾ ಮಣ್ಣುಮುಕ್ಕ ಹಾವಿಗಾಗಿ ಕೊಲೆ ಮಾಡಿದ ಆರೋಪದಲ್ಲಿ ತಂದೆ-ಮಗನನ್ನು ಕಲಬುರಗಿಯ ಕಮಲಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಂದೆ ರಾಮಚಂದ್ರ ಚಿಲಾನೋರ ಮತ್ತು ಮಗ ಭರತ್ ಚಿಲಾನೋರ ಎಂದು ಗುರುತಿಸಲಾಗಿದೆ.
ನವೆಂಬರ್ 4ರಂದು ಬೀದರ್ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಕೊಡಂಬಲ ಗ್ರಾಮದ ನಿವಾಸಿ ಸಿದ್ರಾಮಪ್ಪ ಸಾಸರವಗ್ಗೆ ಎಂಬಾತನನ್ನು ತಂದೆ-ಮಗ ಸೇರಿ ಕೊಲೆ ಮಾಡಿದ್ದರು. ಕಮಲಾಪುರ ತಾಲೂಕಿನ ಪಟವಾದ ಗ್ರಾಮದ ಮುಲ್ಲಾಮಾರಿ ಹಳ್ಳದಲ್ಲಿ ಸಿದ್ರಾಮಪ್ಪ ಶವವಾಗಿ ಪತ್ತೆಯಾಗಿತ್ತು.
ಘಟನೆಯ ವಿವರಕ್ಕೆ ಬರುವುದಾದರೆ, ಸ್ನೇಹಿತರಾಗಿದ್ದ ಸಿದ್ರಾಮಪ್ಪ ಹಾಗೂ ರಾಮಚಂದ್ರ ಎರಡು ತಲೆ ಹಾವು ತಂದಿದ್ದರು. ಅದನ್ನು ಸಿದ್ರಾಮಪ್ಪ, ರಾಮಣ್ಣನ ಮನೆಯಲ್ಲೇ ಇಟ್ಟಿದ್ದ. ಆದರೆ, ಸಿದ್ರಾಮಪ್ಪನಿಗೆ ತಿಳಿಯದ ಹಾಗೆ ಹಾವನ್ನು ಶ್ರೀಮಂತ ಎಂಬಾತನಿಗೆ ರಾಮಣ್ಣ ಮಾರಿದ್ದ.
ಇದನ್ನೂ ಓದಿ:ಮದುವೆಗೆ ಹೊರಟಿದ್ದವಳು ಕಾಡು ಸೇರಿದಳು; 14 ದಿನ ರೇಪ್​ ಮಾಡಿದ ಕಾಮುಕ!
ನವೆಂಬರ್ 4ರಂದು ರಾಮಚಂದ್ರ ಮನೆಗೆ ತೆರಳಿದ‌ ಸಿದ್ರಾಮಪ್ಪ ಹಾವು ಕೊಡುವಂತೆ ಗಲಾಟೆ ತೆಗೆದಿದ್ದ. ಹಾವು ಕೊಡುವುದಕ್ಕೆ ಹಿಂದೇಟು ಹಾಕಿದ್ದ ರಾಮಣ್ಣನಿಗೆ ಸಿದ್ರಾಮಪ್ಪ ಆವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ಕೋಪಗೊಂಡ ರಾಮಣ್ಣನ ಮಗ ಭರತ್​ ಚಾಕುವಿನಿಂದ ಸಿದ್ರಾಮಪ್ಪನ ಕತ್ತಿಗೆ ಇರಿದಿದ್ದ. ಬಳಿಕ ರಾಮಣ್ಣ ಸಹ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ್ದ.
ಇದಾದ ಬಳಿಕ ಸಿದ್ರಾಮಪ್ಪನ ಶವವನ್ನು ರಾಮಣ್ಣ ಹಾಗೂ ಆತನ ಮಗ ಕೌದಿಯಲ್ಲಿ ಕಟ್ಟಿ ತಮ್ಮದೇ ಟಿವಿಎಸ್ ಬೈಕ್ ಮೇಲೆ ತಂದು ಪಟವಾದ ಹಳ್ಳದ ಸೇತುವೆ ಬಳಿ ಬಿಸಾಕಿದ್ದರು. ಅಪರಿಚಿತ ಶವ ಪತ್ತೆ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಕಮಲಾಪುರ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಸುಂದರವಾಗಿದ್ದ ಈಕೆಯ ಮುಖ ಹೀಗೇಕಾಯಿತು? ಹುಡುಗಿಯ ಮಾತು ಕೇಳಿದ್ರೆ ಶಾಕ್​ ಆಗ್ತೀರಾ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + six =
Remember me
