ಚಿಕ್ಕೋಡಿ:ಕಳ್ಳತನ‌ ಮಾಡುತ್ತಿದ್ದ ಇಬ್ಬರು ಇರಾನಿ ಗ್ಯಾಂಗ್​ನ ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಹುಕ್ಕೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿನ್ನಾಭರಣ ಹಾಗೂ ಕಿರಾಣಿ ಅಂಗಡಿಗಳನ್ನು ದೋಚುತ್ತಿದ್ದ ಖದೀಮರಿಂದ ಒಟ್ಟು 9.58 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣ ವಶಕ್ಕೆ ಪಡೆಯಲಾಗಿದೆ.
ಕಳೆದ ತಿಂಗಳು ಹುಕ್ಕೇರಿ ಪಟ್ಟಣದ ವಿದ್ಯಾ ಜ್ಯುವೇಲರಿ ಶಾಪ್‌ನಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದು ಬಂಗಾರದ ಆಭರಣ ಕಳ್ಳತನ ಮಾಡಿದ್ದರು. ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೈಗೊಂಡಿದ್ದರು.

ಬಂಧಿತ ಕಳ್ಳರಿಂದ ಕಿರಾಣಿ ಅಂಗಡಿಯಲ್ಲಿ ಕಳ್ಳತನವಾಗಿದ್ದ 2 ಲಕ್ಷದ 80 ಸಾವಿರ ರೂ. ನಗದು, ಬಂಗಾರದ ಅಂಗಡಿಯಲ್ಲಿ ಕದ್ದಿದ್ದ 150 ಗ್ರಾಂ ಬಂಗಾರದ ಆಭರಣಗಳನ್ನ ವಶ ಪಡಿಸಿಕೊಳ್ಳಲಾಗಿದೆ. ಅಲ್ಲದೇ ಮೂಡಲಗಿ ಹಾಗೂ ಮಹಾರಾಷ್ಟ್ರದ ಚಂದಗಡ ಪಟ್ಟಣದ ಬಂಗಾರದ ಅಂಗಡಿಗಳನ್ನು ಕಳ್ಳತನ ಮಾಡಿದ್ದನ್ನು ಹುಕ್ಕೇರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಿಕ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ಸಾವು: ಆಟ ಆಡುತ್ತಿರುವಾಗಲೇ ಜೀವ ಕಸಿದ ದುರ್ವಿಧಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
