ಬೆಂಗಳೂರು:ಉದ್ಯೋಗ ಹುಡುಕಿಕೊಂಡು ಹೋಗಿ ಕಾಂಬೋಡಿಯಾದಲ್ಲಿ ಸಿಲುಕಿದ್ದ ಕನ್ನಡಿಗ ಯುವಕರಿಬ್ಬರು ಸುರಕ್ಷಿತವಾಗಿ ತಾಯ್ನಡಿಗೆ ವಾಪಸ್ಸಾಗಿದ್ದಾರೆ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿಕೃಷ್ಣ ಮಾಹಿತಿ ನೀಡಿದರು.
ಬಹುಮಹಡಿ ಕಟ್ಟಡದಲ್ಲಿರುವ ಅನಿವಾಸಿ ಭಾರತೀಯ ಸಮಿತಿ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಾಗುಂಡಿ ಗ್ರಾಮದ ಅಶೋಕ್ ಹಾಗೂ ಕೋಲಾರ ಮೂಲದ ಜಯಪಾಲ್ ಜಯಶಂಕರ್ ಅವರನ್ನು ರಕ್ಷಿಸಿ ಸ್ವದೇಶಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಯುವಕರಿಬ್ಬರ ಪಾಸ್‌ಪೋರ್ಟ್ ಹಾಗೂ ವೀಸಾವನ್ನು ಖಾಸಗಿ ಸಂಸ್ಥೆಯು ತನ್ನ ವಶದಲ್ಲಿಟ್ಟುಕೊಂಡು ಸ್ವದೇಶಕ್ಕೆ ಮರಳಲು ಅವಕಾಶ ನೀಡದೆ ಕಿರುಕುಳ ನೀಡುತ್ತಿತ್ತು. ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಪಾಲಕರಿಂದ ಈ ಮಾಹಿತಿ ಲಭಿಸುತ್ತಿದ್ದಂತೆಯೇ ನವದೆಹಲಿಗೆ ತೆರಳಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗೆ ವಿಷಯ ತಿಳಿಸಲಾಯಿತು.
ಕಾಂಬೋಡಿಯಾ ದೇಶದ ಭಾರತೀಯ ರಾಯಭಾರಿ ಕಚೇರಿ ಮುಖ್ಯಸ್ಥರ ಗಮನಕ್ಕೆ ತಂದು ಅಶೋಕ್ ಹಾಗೂ ಜಯಪಾಲ್ ಜಯಶಂಕರ್ ಅವರನ್ನು ಕರೆತಂದಿದ್ದೇವೆ.
ವಿವಿಧ ವೀಸಾ ವಿಭಾಗಗಳಲ್ಲಿ ನಕಲಿ ಉದ್ಯೋಗಗಳ ಜಾಹೀರಾತು ನಂಬಿ ಹಲವಾರು ಭಾರತೀಯರು ಕಾಂಬೋಡಿಯಾ ದೇಶಕ್ಕೆ ಹೋಗಿ, ಮಾನವ ಸಾಗಾಣಿಕೆ ಏಜೆಂಟರ ಬಲೆಗೆ ಸಿಲುಕುತ್ತಾರೆ.
ನಂತರ ಬೇರೆ ದಾರಿ ಕಾಣದೆ ವಿವಿಧ ರೀತಿಯ ಅಪರಾಧ, ಇತರೆ ಆರ್ಥಿಕ ವಂಚನೆ ಜಾಲತಾಣಗಳಿಗೆ ಮಾರಾಟವಾಗುತ್ತಾರೆ. ಇಂತಹವರ ಪಾಸ್‌ಪೋರ್ಟ್, ವೀಸಾಗಳನ್ನು ಖಾಸಗಿ ಸಂಸ್ಥೆಗಳು ತಮ್ಮ ವಶಕ್ಕೆ ಪಡೆದು ಮೋಸದ ಬಲೆಗೆ ಕೆಡವಿ ಮಾನಸಿಕ, ದೈಹಿಕ ಹಿಂಸೆ ನೀಡುತ್ತಾರೆ ಎಂದು ಡಾ.ಆರತಿಕೃಷ್ಣ ವಿವರಿಸಿದರು.
ವಿದೇಶಿಗಳಲ್ಲಿ ಉದ್ಯೋಗ ಅಥವಾ ವಿದ್ಯಾಭ್ಯಾಸ ಬಯಸುವವರು ವಿದೇಶಗಳಿಗೆ ತೆರಳುವ ಮುನ್ನ ಅನಿವಾಸಿ ಭಾರತೀಯ ಸಮಿತಿ ಜಾಲತಾಣ (https://nriforum.karnataka.gov.in/) ಕ್ಕೆ ಭೇಟಿ ನೀಡಿ, ಹೆಸರು ನೋಂದಣಿ ಮಾಡಿಕೊಳ್ಳಬೇಕು. ಅಧಿಕೃತ ಏಜೆನ್ಸಿಯೇ ಎಂದು ಪರಿಶೀಲಿಸಿ ಖಚಿತಪಡಿಸಿಕೊಂಡು ಪಾಲಕರು/ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿ ಹೊರದೇಶಕ್ಕೆ ಹೋಗುವುದು ಸುರಕ್ಷಿತ ಮಾರ್ಗ.ವಿದೇಶಕ್ಕೆ ಹೋದ ನಂತರ ತಮ್ಮ ಕುಂದು-ಕೊರತೆಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾನ್ಸುಲರ್ ಸೇವೆಗಳ ನಿರ್ವಹಣಾ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ದಾಖಲಿಸಲು ಅವಕಾಶವಿದೆ ಎಂದು ಡಾ.ಆರತಿಕೃಷ್ಣ ಸಲಹೆ ನೀಡಿದರು.ಮಾಹಿತಿಗೆ ಉಪಾಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು, ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ, ಮೂರನೇ ಮಹಡಿ, 4ನೇ ಹಂತ ಬಹುಮಹಡಿ ಕಟ್ಟಡ, ಇ ಮೇಲ್ ಐಡಿ ([email protected]ಅಥವಾ[email protected]), ದೂರವಾಣಿ ಸಂಖ್ಯೆ- 080 22372020 ಗೆ ಸಂಪರ್ಕಿಸಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 3 =
Remember me
