ಆನೇಕಲ್​:ಗಣೇಶ ಮೂರ್ತಿ ವಿಸರ್ಜನೆ ವೇಳೆ ಭಾರೀ ದುರಂತ ಸಂಭವಿಸಿದ್ದು, ಮಕ್ಕಳಿಬ್ಬರು ನೀರುಪಾಲಾಗಿದ್ದಾರೆ.
ಸೂಳಗಿರಿ ವಾಸಿಗಳಾದ ಭೂಪತಿ(12) ಮತ್ತು ಮುರಳಿ(12) ಮೃತ ಬಾಲಕರು. ಗಣೇಶ ಚತುರ್ಥಿ ಪ್ರಯುಕ್ತ ಮಕ್ಕಳು ಮನೆಯಲ್ಲಿಯೇ ಗಣಪನನ್ನು ಪ್ರತಿಷ್ಠಾಪಿಸಿದ್ದರು. 3 ದಿನದ ಬಳಿಕ ಸ್ನೇಹಿತರೊಂದಿಗೆ ತಮಿಳುನಾಡಿನ ಸೂಳಗಿರಿ ಸಮೀಪದ ಅನಾಸಂದ್ರಂ ಕೆರೆಯಲ್ಲಿ ಗಣೇಶ ವಿಸರ್ಜನೆ ಹೋಗಿದ್ದರು.
ಇದನ್ನೂ ಓದಿರಿದೇವರಿಗೆ ಕೈಮುಗಿಯುತ್ತಿದ್ದಾಗಲೇ ವ್ಯಕ್ತಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ!
ಕೆರೆಯ ಆಳ ಅರಿಯದೇ ಗಣೇಶ ವಿಸರ್ಜನೆಗೆ ಭೂಪತಿ ಮತ್ತು ಮುರಳಿ ಇಳಿದಿದ್ದರು. ನೋಡ ನೋಡುತ್ತಿದ್ದಂತೆ ಗಣೇಶ ಮೂರ್ತಿ ಜೊತೆ ಅವರಿಬ್ಬರೂ ನೀರುಪಾಲಾಗಿದ್ದಾರೆ.
ಸ್ಥಳೀಯರ ನೆರವಿನಿಂದ ಮೃತ ದೇಹಗಳನ್ನು ಪೊಲೀಸರು ಹೊರ ತೆಗೆದಿದ್ದಾರೆ. ಸೂಳಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಬ್ಬದ ಸಡಗರದಲ್ಲಿದ್ದ ಊರಿನಲ್ಲಿ ಶೋಕದ ಛಾಯೆ ಆವರಿಸಿದೆ.
ಕಿರುಕುಳಕ್ಕೆ ಯುವ ವಕೀಲ ಬಲಿ, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ

ಮಿಸ್ಟರ್ ಡಿಕೆಶಿ, ನೀವು ಜಾಮೀನಿನ ಮೇಲೆ ಹೊರಗಿದ್ದೀರಿ ಎಂಬುದನ್ನ ಅರಿತುಕೊಳ್ಳಿ; ಪ್ರಹ್ಲಾದ್ ಜೋಶಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 7 =
Remember me
