ಚಿತ್ರದುರ್ಗ:ರಾಜಾಧಿರಾಜರೆಲ್ಲ ಹೋರಾಡಿದ ಕೋಟೆ ನಾಡು ಚಿತ್ರದುರ್ಗ ಕಾಡುಪ್ರಾಣಿಗಳ ಕಾದಾಟಕ್ಕೆ ಸಾಕ್ಷಿಯಾಯಿತು. ಕಾಡಿನಿಂದ ನಾಡಿಗೆ ಬಂದಿದ್ದ ಎರಡು ಚಿರತೆಗಳ ನಡುವೆ ನಡೆದ ಕಾಳಗದಲ್ಲಿ ಗಂಡು ಚಿರತೆ ಮೃತಪಟ್ಟಿದ್ದು, ಮತ್ತೊಂದು ಚಿರತೆಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗುಂಡೇರಿ ಕಾವಲ್​ಕೆರೆ ಎಂಬಲ್ಲಿ ಚಿರತೆಗಳ ಈ ಕಾದಾಟ ನಡೆದಿದೆ. ಇದರಲ್ಲಿ ಇನ್ನೊಂದು ಚಿರತೆಯ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಗಂಡು ಚಿರತೆ ಮೃತಪಟ್ಟಿದೆ.
ಸುಮಾರು ನಾಲ್ಕು ವರ್ಷಗಳ ಪ್ರಾಯದ ಈ ಚಿರತೆಯ ಮೃತದೇಹವನ್ನು ಅರಣ್ಯಾಧಿಕಾರಿಗಳು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು, ಮತ್ತೊಂದು ಚಿರತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಲಯ ಅರಣ್ಯಾಧಿಕಾರಿ ವಸಂತ್ ಕುಮಾರ್ ನೇತೃತ್ವದಲ್ಲಿ ಈ ಹುಡುಕಾಟ ನಡೆಯುತ್ತಿದ್ದು, ಸ್ಥಳೀಯರು ಕೂಡ ಈ ಹುಡುಕಾಟಕ್ಕೆ ಸಾಥ್ ನೀಡುತ್ತಿದ್ದಾರೆ. ಚಿರತೆಯ ಹುಡುಕಾಟಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಇದು ಸೆಕ್ಸ್​ ಚೇಂಜ್​ನ ಸೈಡ್ ಇಫೆಕ್ಟ್​: ಈಗ ಒಂದಕ್ಕೊಂದು ತಾಳೆ ಆಗುತ್ತಿಲ್ಲವಂತೆ..!!!

ನಮಗೆ ನಾಯಿಯೂ ಮಗಳ ಥರ ಎಂದು ಸೀಮಂತ ಮಾಡಿದ ದಂಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seven =
Remember me
