ಗದಗ:ಮೋಜಿಗಾಗಿ ಈಜಿಗಾಗಿ ಬೈಕ್​ನಲ್ಲಿ ಹೋಗಿದ್ದ ಹದಿನೈದು ವರ್ಷದ ಬಾಲಕರಿಬ್ಬರು ಅಲ್ಲಿಂದ ಮರಳುವಾಗ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮರಣಕ್ಕೀಡಾದ ಪ್ರಕರಣವೊಂದು ನಡೆದಿದೆ. ಗದಗ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.
ಗದಗದ ರೋಣ ನಿವಾಸಿಗಳಾದ ಅನುಪ ಇಟಗಿ (15), ಶ್ರೀಶಾಂತ ಗಡಗಿ (15) ಸಾವಿಗೀಡಾದ ಬಾಲಕರು. ರೋಣ ಪಟ್ಟಣದ ಬಸ್​ ಡಿಪೋ ಬಳಿ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಇವರ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದೆ.
ಇದನ್ನೂ ಓದಿ:ಹೆಲ್ಮೆಟ್​ ಧರಿಸದ ಮಹಿಳಾ ಪಿಎಸ್​ಐ; ಟ್ವೀಟ್ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲು, ದಂಡ ವಿಧಿಸಿದ ಪೊಲೀಸರು
ಇವರು ಗದಗದ ಅಬ್ಬಿಗೇರಿ ಗ್ರಾಮದ ಬಳಿಯ ಕಲಾಕಾಶಿ ಈಜು‌ಕೊಳ್ಳಕ್ಕೆ ಹೋಗಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂದು ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಇಂದು ಬಿ.ಎಲ್.ಸಂತೋಷ್ ಮರುಪ್ರಶ್ನೆ!: ವಿಷಯ ಇದು..
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + 13 =
Remember me
