ಬೆಂಗಳೂರು:ಚೀನಾದಿಂದ ಭಾರತ ಮತ್ತು ಇತರೆ ದೇಶಗಳಿಗೆ ಬಂದಿರುವ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಇಂದು ಮತ್ತಿಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಈ ಮೂಲಕ ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ವೈರಸ್​ ದಾಳಿಗೆ ಒಳಗಾದ ರಾಜ್ಯಗಳ ಪೈಕಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಯುಎಸ್​ಎ ಪ್ರವಾಸ ಮುಗಿಸಿ ಭಾರತಕ್ಕೆ ಮಾರ್ಚ್​ 6ರಂದು ಹಿಂದಿರುಗಿದ್ದ 56 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಸೋಂಕಿರುವುದು ಧೃಡವಾಗಿದೆ. 25 ವರ್ಷದ ಮಹಿಳೆಯೊಬ್ಬರು ಸ್ಪೇನ್​ನ ಪ್ರವಾಸ ಕೈಗೊಂಡು ಬೆಂಗಳೂರಿಗೆ ಮರಳಿದ್ದು ಆಕೆಯಲ್ಲಿಯೂ ಸಹ ಸೋಂಕಿರುವುದು ಧೃಡವಾಗಿದೆ. ಸದ್ಯ ಇಬ್ಬರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವ ಶ್ರೀ ರಾಮುಲು ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಸೋಂಕಿತನೊಬ್ಬ ಮರಣ ಹೊಂದಿದ್ದು, ಆತನ ಕುಟುಂಬದ ಒಬ್ಬರಿಗೆ ಮತ್ತು ಆತನಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸೋಂಕು ತಗುಲಿರುವುದು ಧೃಡವಾಗಿದೆ. ಜಿಲ್ಲೆಯಲ್ಲಿ ಸೋಂಕಿನ ಭಯ ಹೆಚ್ಚಾಗಿರುವ ಕಾರಣ ಕರೊನಾ ಸೋಂಕು ಪತ್ತೆ ಹಚ್ಚುವ ಲ್ಯಾಬ್​ ನಿರ್ಮಾಣ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ. ಇನ್ನು ಮೂರು ನಾಲ್ಕು ದಿನದಲ್ಲಿ ಲ್ಯಾಬ್​ ಆರಂಭ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ತಮಗೆ ಕರೊನಾ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು ಉತ್ತರ ಕರ್ನಾಟಕದ ಜನ ಎರಡು ಮೂರು ದಿನ ಕಾಯುವ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ಅತ್ಯಾಧುನಿಕ ಲ್ಯಾಬ್​ನ್ನು ಕಲಬುರಗಿಯಲ್ಲಿ ನಿರ್ಮಿಸುವುದಾಗಿ ತಿಳಿಸಲಾಗಿದೆ.
ರಾಜ್ಯದಲ್ಲಿ ಐದು ಕೇಂದ್ರಗಳಲ್ಲಿ ಕರೊನಾ ಟೆಸ್ಟಿಂಗ್​ ನಡೆಯುತ್ತಿದ್ದು ಅವುಗಳ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ#COVID19ಸೋಂಕು ದೃಢಪಟ್ಟಿದೆ. ಒಬ್ಬರು 56 ವಯಸ್ಸು, USA ಪ್ರವಾಸದಿಂದ ಮಾರ್ಚ್ 6ರಂದು ಹಿಂದಿರುಗಿದ್ದರು. ಇನ್ನೊಬ್ಬರು 25 ವರ್ಷದ ಮಹಿಳೆಯು, ಸ್ಪೇನ್ ಪ್ರವಾಸದಿಂದ ಹಿಂದಿರುಗಿದ್ದು, ಇಬ್ಬರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.
— B Sriramulu (@sriramulubjp)March 18, 2020

ರಸ್ತೆ ಅಪಘಾತದಲ್ಲಿ ವರ್ಷಕ್ಕೆ ಸಾವಿರಾರು ಜನರು ಸಾಯುವಾಗ ಕರೊನಾ ಬಗ್ಗೆ ಇಷ್ಟೊಂದು ಚಿಂತೆಯೇಕೆ? ವೈದ್ಯರೇ ನೀಡಿದ್ದಾರೆ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
