ಬೆಂಗಳೂರು :ಕನ್ನಡ ಸಾಹಿತ್ಯ ಪರಿಷತ್(ಕಸಾಪ) ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಇಲ್ಲಿಯವರೆಗೆ ಮೂವರು ನಾಮಪತ್ರ ಸಲ್ಲಿಸಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತೂ ಇಬ್ಬರು ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ. ಜನಪ್ರಿಯತೆ ಹೊಂದಿರುವ ಅಭ್ಯರ್ಥಿಗಳೊಂದಿಗೆ ಚುನಾವಣಾ ಕಣ ಇದೀಗ ರಂಗೇರಿದೆ.
ಈ ಮುನ್ನ ಕಸಾಪ ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಸಾಹಿತಿ ಸಂಗಮೇಶ ಬಾದವಾಡಗಿ ನಿನ್ನೆ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ಒಡ್ಡಬಲ್ಲ ಡಾ. ಮಹೇಶ್ ಜೋಶಿ ಹಾಗೂ ವ.ಚ.‌ಚನ್ನೇಗೌಡ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಮತ್ತೂ ಪ್ರಬಲ ಸ್ಪರ್ಧಿಗಳು ಎನ್ನಲಾದ ಸಿ.ಕೆ.‌ರಾಮೇಗೌಡ ಏ.1 ರಂದು ಮತ್ತು ಡಾ. ಶೇಖರಗೌಡ ಮಾಲಿಪಾಟೀಲ ಏ.5 ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಇದನ್ನೂ ಓದಿ:ಕಸಾಪ ಚುನಾವಣೆ: ಮತದಾರರ ಅಂತಿಮ ಪಟ್ಟಿ ಪ್ರಕಟ
ದೂರದರ್ಶನ ವಾಹಿನಿಯಲ್ಲಿ ಮಹಾನಿರ್ದೇಶಕ ಸ್ಥಾನದವರೆಗೆ ಸೇವೆ ಸಲ್ಲಿಸಿರುವ ಮಹೇಶ್ ಜೋಶಿ ಅವರು, ಮಧುರ ಮಧುರವೀ ಮಂಜುಳ ಗಾನ ಕಾರ್ಯಕ್ರಮದ ಮೂಲಕ ವಾಹಿನಿಯನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸಿದರು. ಈಗಾಗಲೇ ಮೂರು ವರ್ಷಗಳಿಂದ ಅವರ ಹೆಸರು ಕಸಾಪ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಮತ್ತೊಂದೆಡೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವ.ಚ.‌ಚನ್ನೇಗೌಡ, ಕನ್ನಡದ ಅನೇಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.
ಬಿಗ್ ಬಾಸ್​ ಖ್ಯಾತಿಯ ಅಜಾಜ್ ಖಾನ್ ಡ್ರಗ್ಸ್ ಕೇಸಲ್ಲಿ ಅರೆಸ್ಟ್
‘ಓದು-ಬರಹ ಅಭಿಯಾನದಡಿ 3.2 ಲಕ್ಷ ಜನರಿಗೆ ಅಕ್ಷರ ಜ್ಞಾನ’
ಮತ್ತಿನಲ್ಲಿ ಮನೆಯೊಳಗೆ ನುಗ್ಗಿದರು, ವೃದ್ಧೆಯನ್ನು ಹೊಡೆದು ಸಾಯಿಸಿದರು!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 19 =
Remember me
