ಬೆಂಗಳೂರು:ರಾಜ್ಯದ ಒಟ್ಟಾರೆ ಸೋಂಕಿನ ಪೈಕಿ ಅತಿಹೆಚ್ಚು ರಾಜ್ಯದ ರಾಜಧಾನಿಯಲ್ಲೇ ಇದ್ದು, ಸೋಂಕಿತರು ಸರಿಯಾದ ಸಮಯಕ್ಕೆ ಹಾಸಿಗೆ, ಐಸಿಯು, ಆಕ್ಸಿಜನ್ ಸಿಗದೆ ಒದ್ದಾಡುತ್ತಿದ್ದರೆ ಒಂದಷ್ಟು ಮಂದಿ ಇಂಥ ಸಂದರ್ಭದಲ್ಲೂ ಬೆಡ್ ಬ್ಲಾಕಿಂಗ್ ಮಾಡಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ. ಅಂಥ ಪ್ರಕರಣವನ್ನು ಸಂಸದ-ಶಾಸಕರು ಜತೆಯಾಗಿ ಬಯಲಿಗೆಳೆದ ಬೆನ್ನಿಗೇ ಇಬ್ಬರು ಆರೋಪಿಗಳ ಬಂಧನವಾಗಿದೆ.
ಬೆಡ್​ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ರೋಹಿತ್ ಮತ್ತು ನೇತ್ರಾ ಎಂಬಿಬ್ಬರು ಏಜೆಂಟ್​ಗಳನ್ನು ಬಂಧಿಸಿದ್ದಾರೆ. ಬೆಡ್​ ಬ್ಲಾಕಿಂಗ್ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ.
ಈ ದಂಧೆಯ ಹಿಂದೆ ಇವರಿಬ್ಬರಲ್ಲದೆ ಇನ್ನೂ ಕೆಲವರು ಇರುವ ಶಂಕೆ ಇದ್ದು, ಪೊಲೀಸರು ಮತ್ತಷ್ಟು ತನಿಖೆಗೆ ಮುಂದಾಗಿದ್ದಾರೆ. ಬೆಡ್​ ಬ್ಲಾಕಿಂಗ್ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಅವರು ಪೊಲೀಸರೊಂದಿಗೆ ಸ್ಥಳಕ್ಕೇ ತೆರಳಿ ಬಯಲಿಗೆಳೆದಿದ್ದಾರೆ.
ಬೆಡ್​ ಬ್ಲಾಕ್​ ದಂಧೆಯ ಬ್ರಹ್ಮಾಂಡ ಬಿಚ್ಚಿಟ್ಟ ತೇಜಸ್ವಿ ಸೂರ್ಯ: ಭ್ರಷ್ಟಾಚಾರ ಅಲ್ಲ ಇದು ಮರ್ಡರ್… ಇವರೆಲ್ಲ ಹುಳ ಬಿದ್ದು ಸಾಯ್ತಾರೆ
ದೀಪಿಕಾ ಅಪ್ಪ-ಅಮ್ಮ, ತಂಗಿಗೂ ಕರೊನಾ ಸೋಂಕು; ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಆಸ್ಪತ್ರೆಯಲ್ಲಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 14 =
Remember me
