ಉತ್ತರಕನ್ನಡ/ಬೀದರ್​:ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಲ್ಲಿ ಇಬ್ಬರು ಯುವಕರು ನೀರುಪಾಲಾಗಿ ಮೃತಪಟ್ಟಿದ್ದಾರೆ. ಒಂದು ಅನಾಹುತ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದ್ದರೆ ಇನ್ನೊಂದು ಬೀದರ್​ ಜಿಲ್ಲೆಯಲ್ಲಿ ಸಂಭವಿಸಿದೆ.
ಉತ್ತರಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಮಳಗಿಯ ನಾಗಿನಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಮುಂಡಗೋಡು ನಿವಾಸಿ ಉಮೇಶ ಬೋವಿವಡ್ಡರ್ (28) ಮೃತಪಟ್ಟಿದ್ದಾನೆ. ಮುಳುಗಿ ಕೆರೆಯಲ್ಲಿ ಸಿಲುಕಿದ್ದ ಈತನ ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದು, ಮುಂಡಗೋಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಸದ ರಾಶಿ ಬಳಿ ಹಿರಿಯ ನಟಿ ಬಿ. ಜಯಾ ಶವ; ಅಸಲಿಗೆ ಅಲ್ಲಿ ನಡೆದಿದ್ದೇನು?
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದ ವಿದ್ಯಾರ್ಥಿ ಅಮೀತ ಬಿರಾದಾರ ( 18) ಎಂಬ ವಿದ್ಯಾರ್ಥಿ ನೀರುಪಾಲಾಗಿ ಸಾವಿಗೀಡಾಗಿದ್ದಾನೆ. ಈಜು ಬರದಿದ್ದರೂ ಗ್ರಾಮದ ಹೊರವಲಯದಲ್ಲಿರುವ ಬಾವಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೂತಿಟ್ಟ 20 ದಿನಗಳ ಬಳಿಕ ಶವ ಹೊರಕ್ಕೆ ತೆಗೆಸಿದ ಪೊಲೀಸರು!; ಅದು ಬರೀ ಸಾವಲ್ಲ, ಕೊಲೆ..

5 ಸಾವಿರ ಪ್ರಾಣಿಗಳಿಗಾಗಿ ಕೈಜೋಡಿಸಿ ಕೋರಿಕೊಂಡ ನಟ ದರ್ಶನ್​; ಚಾಲೆಂಜಿಂಗ್ ಸ್ಟಾರ್ ವಿನಂತಿ ಇಷ್ಟೇ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
