ಮಂಡ್ಯ:ತಾಲೂಕಿನ ಯಲಿಯೂರು ಸಮೀಪದ ತೋಟದಲ್ಲಿ ಗುರುವಾರ ತಡರಾತ್ರಿ ಬರ್ಬರವಾಗಿ ಜೋಡಿ ಕೊಲೆಯಾಗಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ನೆಲಮಗಲ ತಾಲೂಕಿನ ಮರಳಕುಂಟೆ ಗ್ರಾಮದ ರಾಮಮೂರ್ತಿ (46) ಹಾಗೂ ಶ್ರೀರಂಗಪಟ್ಟಣ ತಾಲೂಕಿನ ತಡವಾಡಿ ಗ್ರಾಮದ ಬಸವರಾಜು (44) ಹತ್ಯೆಯಾದ ದುರ್ದೈವಿಗಳು. ಇವರು ಯಲಿಯೂರು ಬಳಿಯ ತೋಟದಲ್ಲಿ ಮಂಡ್ಯದ ಗುತ್ತಲು ಬಡಾವಣೆಯ ಚಲುವರಾಜು ಎಂಬುವರಿಗೆ ಸೇರಿದ ಮಾರುತಿ ಬ್ರಿಕ್ಸ್ ಕಾರ್ಖಾನೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.ಇದನ್ನೂ ಓದಿರಿಅಕ್ರಮವಾಗಿ ಮರಳು ತೆಗೆಯಲು ಅಪ್ಪನ ಜತೆ ಹೋಗಿದ್ದ ಯುವತಿ ಅಲ್ಲೇ ಪ್ರಾಣಬಿಟ್ಟಳು!
ಜೋಡಿ ಕೊಲೆಯಾದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವಗಳನ್ನು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು. ಈ ಸಂಬಂದ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ರಾಮಮೂರ್ತಿ ಹಾಗೂ ಬಸವರಾಜು ಮನೆ ಬಿಟ್ಟು ಇಟ್ಟಿಗೆ ಫ್ಯಾಕ್ಟರಿಯ ಕೆಲಸದಲ್ಲೇ ತೊಡಗಿಕೊಂಡಿದ್ದರು. ಕುಟಂಬದೊಂದಿಗೆ ಸಂಪರ್ಕವಿರಲಿಲ್ಲ ಎನ್ನಲಾಗಿದೆ. ಕುಡಿದ ಮತ್ತಿನಲ್ಲಿ ಅಪರಿಚಿತರೊಂದಿಗೆ ಗಲಾಟೆ ಮಾಡಿಕೊಂಡಿದ್ದು, ಜಗಳ ವಿಕೋಪಕ್ಕೆ ಹೋದ ಪರಿಣಾಮ ಮಾರಕಾಸ್ತ್ರಗಳಿಂದ ಇಬ್ಬರನ್ನೂ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಅಪ್ಪ-ಅಮ್ಮನಿಗೂ ಹೇಳದೆ ಮದುವೆಯಾದ ಯುವತಿ ಗಂಡನ ಮನೆಯ ಕಿಟಕಿಯಲ್ಲಿ ಶವವಾದ್ಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
