ಮೈಸೂರು:ಕಳೆದುಹೋದ ಮೊಬೈಲ್​ಫೋನ್​ ವಿಚಾರವಾಗಿ ಉಂಟಾದ ವಾಗ್ವಾದ ಗಲಾಟೆಗೆ ತಿರುಗಿ ಬಳಿಕ ಮತ್ತೊಬ್ಬ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೆ ತೆರಳಿದೆ. ಮೈಸೂರಿನ ಉದಯಗಿರಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಲ್ಯಾಣಗಿರಿಯ ಯಾಸಿನ್​ (21) ಎಂಬಾತನ ಕೊಲೆಯಾಗಿದೆ. ಮೊಹಮ್ಮದ್ ರಹೀಮ್​ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೊಹಮ್ಮದ್​ ರಹೀಮ್ ಕೆಲವು ದಿನಗಳ ಹಿಂದೆ ಮೊಬೈಲ್​ಫೋನ್ ಕಳೆದುಕೊಂಡಿದ್ದು, ಸೆಕೆಂಡ್ಸ್ ಮೊಬೈಲ್​ಫೋನ್​ಗಾಗಿ ಹುಡುಕಾಟ ನಡೆಸುತ್ತಿದ್ದಾಗ ತನ್ನದೇ ಮೊಬೈಲ್​ಫೋನ್​ ಪತ್ತೆಯಾಗಿತ್ತು. ಈ ಸಂಬಂಧ ಮುಜಾಯಿದ್ ಎಂಬಾತನೊಂದಿಗೆ ವಾಗ್ವಾದ ನಡೆದಿದ್ದು, ಬಳಿಕ ಅದು ವಿಕೋಪಕ್ಕೆ ತೆರಳಿ ಗಲಾಟೆಗೆ ತೆರಳಿದೆ.
ಮುಜಾಯಿದ್ ಇದೇ ದ್ವೇಷಕ್ಕೆ ಸುಮಾರು 15 ಜನರೊಂದಿಗೆ ಗುಂಪು ಕಟ್ಟಿಕೊಂಡು ಬಂದಿದ್ದು, ರಹೀಮ್ ತನ್ನ ಸ್ನೇಹಿತ ಯಾಸಿನ್​ ಜೊತೆಗಿರುವಾಗಲೇ ಮುಖಾಮುಖಿ ಆಗಿದೆ. ಈ ವೇಳೆ ನಡುರಸ್ತೆಯಲ್ಲೇ ಇಬ್ಬರಿಗೂ ಇರಿದ ಗುಂಪು ಅಲ್ಲಿಂದ ಪರಾರಿಯಾಗಿದೆ. ಪರಿಣಾಮವಾಗಿ ಮೊಬೈಲ್​ಫೋನ್​ ಕಳೆದುಕೊಂಡಿದ್ದ ರಹೀಮ್​ ಗಂಭೀರವಾಗಿ ಗಾಯಗೊಂಡಿದ್ದಾರೆ, ಆತನ ಜೊತೆಗಿದ್ದ ಸ್ನೇಹಿತ ಯಾಸಿನ್ ಚಿಕಿತ್ಸೆ ಫಲಿಸದೆ​ ಪ್ರಾಣ ಕಳೆದುಕೊಂಡಿದ್ದಾನೆ. ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆ ಶುರು, ಬೆಂಚಿಗೊಬ್ರು ಅಥವಾ ಇಬ್ರು; ಆ ಕಡೆಯಿಂದ ಬಂದು ಈ ಕಡೆಯಿಂದ ಹೋಗ್ಬೇಕು, ಕೆಮ್ಮಿದ್ರೆ ಮನೆಗೆ: ಇಲ್ಲಿದೆ ಎಸ್​ಒಪಿ ಡಿಟೇಲ್ಸ್​..

ಚಿತ್ರನಟಿಗೆ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ; ಬಳಿಕ ನಗ-ನಗದಿನೊಂದಿಗೆ ಪರಾರಿಯಾದ ರೌಡಿಯ ಅಣ್ಣ..

ಗಂಗಾನದಿಯಲ್ಲೊಂದು ಭಾರಿ ಶಾಕ್​; 30ಕ್ಕೂ ಅಧಿಕ ಮಂದಿಗೆ ಗಾಯ, ಸುಮಾರು 20 ಜನ ನಾಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
