ಬಾಗಲಕೋಟೆ:ಈ ಊರಲ್ಲಿನ ಅಂತಿಮ ದಿನದಂದು ನಡೆದ ಹೋಳಿಯಾಟ ಅಕ್ಷರಶಃ ರಕ್ತದೋಕುಳಿ ಎಂಬಂತಾಗಿದೆ. ಏಕೆಂದರೆ ಹೋಳಿಯಾಟದಲ್ಲಿ ತೊಡಗಿದ್ದವರ ಪೈಕಿ ಇಬ್ಬರಿಗೆ ಚೂರಿ ಇರಿಯಲಾಗಿದ್ದು, ತೀವ್ರ ರಕ್ತಸ್ರಾವವಾಗಿದೆ.
ಬಾಗಲಕೋಟೆಯಲ್ಲಿ ಮೂರು ದಿನ ಹೋಳಿ ಹಬ್ಬ ಆಚರಣೆ ಇದ್ದು, ಇಂದು ಮೂರನೇ ದಿನ ಹೋಳಿ ಆಡುವ ಸಂದರ್ಭ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಬಣ್ಣ ಎರಚುವ ವಿಚಾರದಲ್ಲಿ ಉಂಟಾದ ಗಲಾಟೆ ಹಲ್ಲೆಯವರೆಗೂ ತಲುಪಿದೆ.
ಹೋಳಿಯಾಡುತ್ತಿದ್ದ ಅವಿನಾಶ್ (24) ಮತ್ತು ಬಸವರಾಜ (22) ಈ ಘರ್ಷಣೆ ವೇಳೆ ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದರಲ್ಲೂ ಅವಿನಾಶ್ ತುಟಿ ಹಾಗೂ ಕಣ್ಣಿನ ಭಾಗಕ್ಕೆ ಚೂರಿಯಿಂದ ಇರಿದಿದ್ದರೆ, ಬಸವರಾಜನ ಕೆನ್ನೆಗೆ ಚಾಕುವಿನಿಂದ ಗಾಯಗೊಳಿಸಲಾಗಿದೆ. ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲಕೋಟೆ ಮಡುವಿನ ಓಣಿ ಬಳಿ ಘಟನೆ ಸಂಭವಿಸಿದ್ದು, ಬಾಗಲಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಲ್ಸೇತುವೆ ಮೇಲೆ ಸರಣಿ ಅಪಘಾತ, 9 ಕಾರುಗಳು ಜಖಂ; ವೃದ್ಧೆಗೆ ಗಾಯ..

ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಮಳೆ; ಎಷ್ಟು ದಿನ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
