ಉತ್ತರಕನ್ನಡ:ನಿಧಿಯ ಆಸೆಯೇ ಒಂಥರ ವಿಚಿತ್ರ. ನಿಧಿಯನ್ನು ಪಡೆಯುವ ಸಲುವಾಗಿ ಮಾಟ-ಮಂತ್ರ, ತಂತ್ರಗಳಂಥ ಕೆಲಸಗಳಾಗುತ್ತವೆ. ಕೊಲೆಯಂಥ ಪ್ರಕರಣಗಳು ಕೂಡ ನಡೆದಿದ್ದೆ. ಆದರೆ ಇಲ್ಲೊಂದು ಕಡೆ ನಿಧಿ ಇದೆ ಎಂದು ಕನಸಲ್ಲಿ ದೇವರೇ ಹೇಳಿತು ಅಂತ ಒಬ್ಬ ಕಾಡಿನಲ್ಲಿ ಬಾವಿ ತೋಡಲು ಹೋದ ಘಟನೆಯೊಂದು ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೇಳೂರು ಗ್ರಾಮದ ಮೀಸಲು ಅರಣ್ಯಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಕಾಡಿನಲ್ಲಿ ಬಾವಿ ತೋಡುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲಾರಂಭಿಸಿದ್ದಾರೆ. ನಿಧಿಯ ಆಸೆಗೆ ಬಿದ್ದಿದ್ದ ಹಾಗೂ ಬಾವಿ ತೋಡಲು ಆತನಿಗೆ ಸಹಾಯ ಮಾಡುತ್ತಿದ್ದ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.
ಸಿಕ್ಕಿಬಿದ್ದವರಲ್ಲಿ ಒಬ್ಬ ವ್ಯಕ್ತಿಗೆ ದೇವರು ಕನಸಿನಲ್ಲಿ ಬಂದು ಇಂಥ ಜಾಗದಲ್ಲಿ ನಿಧಿ ಇದೆ ಎಂದು ಹೇಳಿತ್ತಂತೆ. ಹೀಗಾಗಿ ಆತ ಇನ್ನೊಬ್ಬನ ಸಹಾಯದಿಂದ ಕಾಡಿಗೆ ಹೋಗಿದ್ದು, ಅಲ್ಲಿ ನಾಲ್ಕೈದು ದಿನಗಳಿಂದ ಪೂಜೆ ಮಾಡಿ ಬಾವಿ ತೋಡಲಾರಂಭಿಸಿದ್ದರು. ಅರಣ್ಯಾಧಿಕಾರಿಗಳು ಈ ವಿಷಯ ತಿಳಿದು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಸಿಕ್ಕಿಬಿದ್ದವರ ಹೆಸರು-ವಿವರ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಸುಮಲತಾ ‘ಸ್ವಾಭಿಮಾನ’ವನ್ನು ಕೆಣಕಿದ ನಿಖಿಲ್ ಕುಮಾರಸ್ವಾಮಿ; 2019ರ ಸೋಲಿಗೆ ನೀವೇ ಉತ್ತರ ಕೊಡಿ ಎಂದು ಜನರಲ್ಲಿ ಮನವಿ

‘ಅಮ್ಮನಿಂದ ಸಿಕ್ಕಿದ್ದು, ಅದನ್ನೇ ದೇಶಕ್ಕೆ ಹಂಚುತ್ತಿದ್ದೇನೆ’ ಎಂದ ರಾಹುಲ್ ಗಾಂಧಿ!

ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + five =
Remember me
