ಚಿಕ್ಕಮಗಳೂರು:ಇದು ಪ್ರಾಣ ತೆಗೆಯಲು ಹೋಗಿ ತಾವೇ ಪ್ರಾಣ ಬಿಟ್ಟಂಥ ಪ್ರಕರಣ. ಮುಳ್ಳುಹಂದಿಯ ಆಸೆಯಿಂದ ಗುಹೆಯೊಳಕ್ಕೆ ಹೊಕ್ಕ ಇಬ್ಬರು ಅಲ್ಲೇ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಇಂಥದ್ದೊಂದು ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದೆ.
ತಮಿಳುನಾಡು ಮೂಲದ ಗೊವಿಂದರಾಜು (3೦) ಮತ್ತು ವಿಜಯ್​ಕುಮಾರ್ (29) ಸಾವಿಗೀಡಾದವರು. ಮೂಡಿಗೆರೆ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗುಹೆಯೊಳಕ್ಕೆ ಒಟ್ಟು ನಾಲ್ವರು ಹೊಕ್ಕಿದ್ದು, ಆ ಪೈಕಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ:ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಗೆ ಸದ್ಯಕ್ಕಿಲ್ಲ ಟೋಲ್​!
ತಮಿಳುನಾಡಿನ ಈ ಕಾರ್ಮಿಕರು ಕಾಫಿತೋಟದ ಕೆಲಸಕ್ಕೆ ಬಂದಿದ್ದರು. ಮುಳ್ಳುಹಂದಿಯನ್ನು ಹಿಡಿಯುವ ಸಲುವಾಗಿ ಗುಹೆಯೊಳಗೆ ಬೆಂಕಿ ಹಾಕಿದ್ದರು. ನಂತರ ನಾಲ್ವರೂ ಒಳಹೊಕ್ಕಿದ್ದರು. ಈ ಸಂದರ್ಭದಲ್ಲಿ ಒಂದು ಮುಳ್ಳುಹಂದಿ ಬೆಂಕಿ ತಗುಲಿ ಸಾವಿಗೀಡಾಗಿದ್ದರೂ ಅದನ್ನು ಹಿಡಿಯಲು ಹೋಗಿದ್ದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು
ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರು ಜೊತೆಯಾಗಿ ಕಾರ್ಯಾಚರಣೆ ನಡೆಸಿ ಶವಗಳನ್ನು ಗುಹೆಯಿಂದ ಹೊರಗೆ ತೆಗೆದಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

ಕೊಲೆಯಾದ ರೂಪದರ್ಶಿಯ ಕಾಲು ಫ್ರಿಡ್ಜ್​ನಲ್ಲಿತ್ತು!; ರುಂಡಕ್ಕಾಗಿ ಪೊಲೀಸರ ಹುಡುಕಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 5 =
Remember me
