ಬೆಳಗಾವಿ:ಹಿಂಡಲಗಾ ಜೈಲಿನಿಂದ ಪೆರೋಲ್​ ಹೆಸರಲ್ಲಿ ಹೊರಗೆ ಹೋದ ಇಬ್ಬರು ಕೈದಿಗಳು ತಲೆಮರೆಸಿಕೊಂಡಿದ್ದು, ಅವರಿಬ್ಬರು ಪೆರೋಲ್ ಹೆಸರಿನಲ್ಲಿ ಪರಾರಿ ಆಗಿದ್ದಾರೆಯೇ ಎಂಬ ಶಂಕೆ ಉಂಟಾಗಿದೆ. ಸಜಾಬಂಧಿಗಳಾದ ರಮೇಶ ವೆಂಕಟರವಣಪ್ಪ ಕುರಿ ಹಾಗೂ ಈಶ್ವರಪ್ಪ ಮಲ್ಲಪ್ಪ ವಗ್ಗರ ತಲೆಮರೆಸಿಕೊಂಡಿರುವ ಕೈದಿಗಳು.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹಳಿಹಟ್ಟಿ ಗ್ರಾಮದ ರಮೇಶ ವೆಂಕಟರವಣಪ್ಪ ಕುರಿ ಸರ್ಕಾರದ ಆದೇಶದಂತೆ ಕೋವಿಡ್​-19 ಹಿನ್ನೆಲೆಯಲ್ಲಿ ಮೇ 15ರಿಂದ ಆಗಸ್ಟ್ 16ರ ವರೆಗೆ ಒಟ್ಟು 90 ದಿನಗಳ ಪೆರೋಲ್ ರಜೆ ಮೇಲೆ ಹೋಗಿದ್ದ. ಆಗಸ್ಟ್ 17ರ ಸಂಜೆ 5.30ಕ್ಕೆ ಆತ ಜೈಲಿಗೆ ಮರಳಬೇಕಿದ್ದರೂ ವಾಪಸ್​ ಬಂದಿರಲಿಲ್ಲ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಚಿಕ್ಕನಿಂದಿ ಗ್ರಾಮದ ಈಶ್ವರ ವಗ್ಗರ (57) ಮೇ 15ರಿಂದ ಆಗಸ್ಟ್ 14ರ ವರೆಗೆ 90 ದಿನಗಳ ಕಾಲ ಪೆರೋಲ್ ರಜೆ ಮೇಲೆ ಹೋಗಿದ್ದು, ಆಗಸ್ಟ್ 15ರಂದು ಕಾರಾಗೃಹಕ್ಕೆ ಮರಳಬೇಕಿತ್ತು. ಅದಾಗ್ಯೂ ಆತ ಬಂದಿರಲಿಲ್ಲ.
ಹೀಗೆ ಪೆರೋಲ್ ಮೇಲೆ ಹೊರ ಹೋಗಿರುವ ಈ ಇಬ್ಬರು ವಾಪಸ್ ಬರದೆ ತಲೆಮರೆಸಿಕೊಂಡಿರುವ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಕೈದಿಗಳ ಕುರಿತು ಸುಳಿವು ಸಿಕ್ಕಲ್ಲಿ ಮಾಹಿತಿ ತಿಳಿಸುವಂತೆ ಪೊಲೀಸರು ಕೋರಿಕೊಂಡಿದ್ದಾರೆ. ಮಾಹಿತಿ ನೀಡುವವರು 9480804031 ಸಂಖ್ಯೆಗೆ ಕರೆ ಮಾಡುವಂತೆ ಪೊಲೀಸರು ಹೇಳಿದ್ದಾರೆ.
ಲಾಂಗ್ ಲಾಂಗ್ ಎಗೋ ಲಾಂಗ್ ಹಿಡಿದ ಅನುಭವದಿಂದ ‘ಪಡ್ಡೆಹುಲಿ’ಗೆ ಲಾಂಗ್ ಹಿಡಿಯಲು ಹೇಳ್ಕೊಟ್ಟ ಶಿವಣ್ಣ
ಗೃಹಸಚಿವರ ಮೇಲೆ ಯಾರು ಅತ್ಯಾಚಾರ ನಡೆಸಿದ್ದಾರೆ?; ತನಿಖೆ ನಡೆಸಿ ಬಹಿರಂಗಪಡಿಸಿ ಎಂದು ಆಗ್ರಹ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen + three =
Remember me
