ಮಂಗಳೂರು:ನಕಲಿ ಮುಸ್ಲಿಂ ಮಂತ್ರವಾದಿಗಳನ್ನು ಮನೆಯಲ್ಲಿ ಕೂಡಿ ಹಾಕಿ ಥಳಿಸಿರುವ ಘಟನೆ ಜೂ.3ರಂದು ದ.ಕ ಜಿಲ್ಲೆಯ ಕಡಬ ತಾಲೂಕಿನ ವಳಾಲು ಎಂಬಲ್ಲಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ:ಮಾವನ 3 ಷರತ್ತುಗಳನ್ನು ಕೇಳಿ ಮದುವೆ ದಿನವೇ ಹೆಂಡತಿಯನ್ನು ಬಿಟ್ಟು ಹೋದ ಗಂಡ!
ಕಡಬ ಕೋಡಿಂಬಳ ನಿವಾಸಿಗಳಾದ ಆಲಿ, ಮಮ್ಮು ಎಂಬುವರು ಮಂತ್ರವಾದಿಗಳ ಸೋಗಿನಲ್ಲಿ ಏಟು ತಿಂದವರು. ಉಪ್ಪಿನಂಗಡಿಯ ಮಗುವಿಗೆ ಆರೋಗ್ಯ ಸಮಸ್ಯೆ ಕಾಡಿದ ಹಿನ್ನೆಲೆಯಲ್ಲಿ ಮುಸ್ಲಿಂ ಕುಟುಂಬ ಮಂತ್ರವಾದಿಗಳನ್ನು ಸಂಪರ್ಕಿಸಿತ್ತು. ಮನೆಗೆ ಆಗಮಿಸಿದ್ದ ಮಂತ್ರವಾದಿಗಳು ಕಪ್ಪು ಬಣ್ಣದ ನೂಲನ್ನು ಮಂತ್ರಿಸಿ ಮಗುವಿಗೆ ಕಟ್ಟಿದರು. ಈ ವೇಳೆ ಮಂತ್ರವಾದಿ ಎಂದು ಹೇಳಿಕೊಂಡವರ ಪರಿಚಯದವರೊಬ್ಬ ಅದೇ ಮನೆಗೆ ಬಂದಾಗ, ಇವರು ಮಂತ್ರವಾದಿಗಳಲ್ಲ ಎಂಬುದು ಗೊತ್ತಾಗಿದೆ. ಇದರಿಂದ ಗುಜರಿ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿ ಮಂತ್ರವಾದಿಯ ಸೋಗಿನಲ್ಲಿ ವಂಚನೆ ನಡೆಸುತ್ತಿದ್ದುದು ಬಹಿರಂಗವಾಗಿದೆ.
ಇದನ್ನೂ ಓದಿ:ಒಡಿಶಾ ರೈಲು ದುರಂತ | ಘಟನಾ ಸ್ಥಳದಲ್ಲಿ ಮನುಷ್ಯರ ದೇಹಗಳ ಕೊಳೆತ ವಾಸನೆ! ರೈಲ್ವೆ ಇಲಾಖೆ ಹೇಳೋದೇನು?
ಮಂತ್ರವಾದಿ ವೇಷ ಬಯಲಾಗುತ್ತಿದ್ದಂತೆ ಯುವಕರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರು ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಾ ಹಿಗ್ಗಾಮುಗ್ಗಾ ಥಳಿಸುತ್ತಿರುವುದು ಗೊತ್ತಾಗಿದೆ. ಸದ್ಯ ಈ ಪ್ರಕರಣ ಠಾಣೆ ಮೆಟ್ಟಿಲೇರಿದ್ದು, ಬಳಿಕ ಮಾತುಕತೆಯ ಮೂಲಕ ಬಗೆಹರಿದಿದೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 9 =
Remember me
