ತುಮಕೂರು:ಮನೆಯ ಮಹಡಿ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್​ ತಂತಿ ತಗುಲಿ ಮಕ್ಕಳಿಬ್ಬರು ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ತುಮಕೂರಿನ ಬೆಳಗುಂಬದ ಸಿದ್ದರಾಮೇಶ್ವರ ಬಡಾವಣೆಯಲ್ಲಿಂದು (ಏಪ್ರಿಲ್​ 20) ನಡೆದಿದೆ.
ಪ್ರಜ್ವಲ್ (14) ಹಾಗೂ ನೀತಿಶ್ (15) ಮೃತ ದುರ್ದೈವಿಗಳು. ಬೇಸಿಗೆ ರಜೆಯ ಮೂಡ್​ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮೃತ ನಿತೀಶ್​ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದ. ಇಂದು ಬೆಳಗ್ಗೆ 8:30 ರ ಸುಮಾರಿಗೆ ತನ್ನ ಸ್ನೇಹಿತ ಪ್ರಜ್ವಲ್ ಜೊತೆ ಆಟವಾಡುತ್ತಿದ್ದ. ಇಬ್ಬರು ಮನೆಯ ಮಹಡಿಯಲ್ಲಿ ಆಟವಾಡಿತ್ತಿದ್ದರು. ಮನೆಯ ಮುಂಭಾಗವೇ ಹಾದುಹೋಗಿರುವ ವಿದ್ಯುತ್ ತಂತಿ ತಗುಲಿ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ:ತಾಯಿಯಾಗುತ್ತಿರುವ ಖುಷಿ ಹಂಚಿಕೊಂಡ ಇಲಿಯಾನಾ! ಗೋವಾ ಬ್ಯೂಟಿಗೆ ಹರಿದುಬಂತು ಪ್ರಶ್ನೆಗಳ ಸುರಿಮಳೆ
ಮೃತ ನಿತೀಶ್​ ತುಮಕೂರು ತಾಲೂಕಿನ ಕುಂದೂರು ಗ್ರಾಮದ ವೀರಭದ್ರಯ್ಯ ಎಂಬುವವರ ಮಗ. ಪ್ರಜ್ವಲ್​ ಬೆಳಗುಂಬ ಗ್ರಾಮದ ಸಿದ್ದಲಿಂಗಯ್ಯ ಎಂಬುವವರ ಮಗ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯರು ಕೆಇಬಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯವೇ ಇಬ್ಬರು ಯುವಕರ ಸಾವಿಗೆ ಕಾರಣ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)‌
ತಾಯಿಯಾಗುತ್ತಿರುವ ಖುಷಿ ಹಂಚಿಕೊಂಡ ಇಲಿಯಾನಾ! ಗೋವಾ ಬ್ಯೂಟಿಗೆ ಹರಿದುಬಂತು ಪ್ರಶ್ನೆಗಳ ಸುರಿಮಳೆ

ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ನಟಿ ಐಶ್ವರ್ಯಾ ಪುತ್ರಿ ಆರಾಧ್ಯ!

ನಿಯಮ ಉಲ್ಲಂಘಿಸಿದರೆ ಬಿಡಲ್ಲ ಕ್ಯಾಮರಾ ಕಣ್ಣು! ದಂಡ ಕಟ್ಟಿಲ್ಲ ಎಂದರೆ ಮನೆ ಬಾಗಿಲಿಗೇ ಬರುತ್ತಾರೆ ಟ್ರಾಫಿಕ್ ಪೊಲೀಸರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
