ಮಂಗಳೂರು:ಒಮ್ನಿ ಕಾರೊಂದು ಇದ್ದಕ್ಕಿದ್ದಂತೆ ಚಲಿಸಿ ಸೀದಾ ಅಂಗಡಿಗೇ ನುಗ್ಗಿ ಅಪಘಾತವೊಂದು ಸಂಭವಿಸಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಬ್ಬರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ (ಎಸ್​ಡಿಎಂ) ಕಾಲೇಜು ಬಳಿ ಈ ಅಪಘಾತ ಸಂಭವಿಸಿದೆ.
ಇಲ್ಲಿನ ಶಾರ್ವರಿ ಕಾಂಪ್ಲೆಕ್ಸ್ ಬಳಿ ನಿಲ್ಲಿಸಿದ್ದ ಈ ಕಾರಿನಲ್ಲಿ ಮಗುವನ್ನು ಬಿಟ್ಟಿದ್ದ ಮಾಲೀಕ, ಬಳಿಕ ಬೇರೆಡೆಗೆ ತೆರಳಿದ್ದ. ಈ ವೇಳೆ ಆತ ಹ್ಯಾಂಡ್​ಲಾಕ್​ ಮಾಡಿರಲಿಲ್ಲ. ಈ ಸಂದರ್ಭದಲ್ಲಿ ಮಗು ಏನಾದರೂ ಮಾಡಿತೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಕಾರು ಇದ್ದಕ್ಕಿದ್ದಂತೆ ಚಲಿಸಿ ಶಾರ್ವರಿ ಕಾಂಪ್ಲೆಕ್ಸ್​ನಲ್ಲಿದ್ದ ತರಕಾರಿ ಅಂಗಡಿಗೆ ನುಗ್ಗಿದೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಬ್ಬರು ಅಂಗಡಿಯಲ್ಲಿ ಖರೀದಿಯಲ್ಲಿ ತೊಡಗಿದ್ದರು. ಆದರೆ ಅಂಗಡಿಯತ್ತ ಕಾರು ನುಗ್ಗುತ್ತಿದ್ದಂತೆ ಹಿಂದಿರುಗಿ ನೋಡಿದ ವಿದ್ಯಾರ್ಥಿನಿಯರು ತಕ್ಷಣ ಪಕ್ಕಕ್ಕೆ ಸರಿದುಕೊಂಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಮತ್ತೊಂದೆಡೆ ಕಾರಿನೊಳಗೆ ಇರುವ ಮಗು ಕೂಡ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಕ್ಕೆ ಒಳಗಾಗದೆ ಬಚಾವಾಗಿದೆ. ಕಾರು ಬಂದು ಅಂಗಡಿಗೆ ನುಗ್ಗಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಿಮ್ಮ ಧರ್ಮಪತ್ನಿಯ ವಿಚಾರದಲ್ಲೇಕೆ ವಕೀಲರನ್ನು ಕರೆಸಿಕೊಂಡ್ರಿ?; ದರ್ಶನ್​ಗೆ ಇಂದ್ರಜಿತ್ ಪ್ರಶ್ನೆ

ನಟ ದರ್ಶನ್​ ಪ್ರಕರಣದಲ್ಲಿ ಟ್ವಿಸ್ಟ್​: ಕೇಳಿ ಬಂತು ಮತ್ತೊಂದು ಹೆಸರು ನಂದಿತಾ!

ಇಲ್ಲಿ ‘ಅಳುಮುಂಜಿ’ಯದ್ದೇ ಜೀವಮಾನದ ಸಾಧನೆ; ಕರೊನಾ ಸಂಕಷ್ಟದಲ್ಲೂ ಟ್ವಿಟರ್​ನಲ್ಲಿ ‘ಆನಂದಬಾಷ್ಪ’!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:seventeen − four =
Remember me
