ಚಿಕ್ಕಮಗಳೂರು:ಕಾಫಿನಾಡಿನ ಪೊಲೀಸರು ಭಾರಿ ಕಳ್ಳರನ್ನೇ ಹಿಡಿದಿದ್ದಾರೆ. ಅಷ್ಟಕ್ಕೂ ಇವರು ಅಂಥಿಂಥ ಕಳ್ಳರಲ್ಲ. ಏಕೆಂದರೆ ಇವರ ಬಳಿ ಕೋಟಿ ರೂಪಾಯಿ ಮೌಲ್ಯದ ಪುರಾತನ ರತ್ನವಿತ್ತು. ಚಿಕ್ಕಮಗಳೂರು ಸಿಇಎನ್​ ಇನ್​ಸ್ಪೆಕ್ಟರ್ ರಕ್ಷಿತ್ ಹಾಗೂ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದೆ.
ಪುರಾತನ ರತ್ನವನ್ನು ಕದ್ದಿರುವ ಈ ಕಳ್ಳರು ಭಯಂಕರ ಇತಿಹಾಸವನ್ನೇ ಹೊಂದಿದ್ದಾರೆ. ಇವರ ಬಳಿ ನಕಲಿ ನೋಟುಗಳು ಕೂಡ ಪತ್ತೆಯಾಗಿವೆ. ಈ ಕಳ್ಳರಿಂದ 5.5 ಲಕ್ಷ ರೂಪಾಯಿಯಷ್ಟು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು, ಮೈಸೂರು ಶಿವಮೊಗ್ಗ, ಹಾಸನ ಸೇರಿ ಹಲವೆಡೆ ಸಕ್ರಿಯವಾಗಿದ್ದ ಇವರ ತಂಡ, ಮನೆಗಳಿಗೆ ನುಗ್ಗಿ ನಾಯಿಗಳಿಗೆ ವಿಷ ಹಾಕಿ ಕಳ್ಳತನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ 3 ಕಾರು, 5 ಮೊಬೈಲ್ ಫೋನ್​, ನಕಲಿ ನೋಟುಗಳ ಮುದ್ರಣಕ್ಕೆ ಬಳಸುತ್ತಿದ್ದ ಕಂಪ್ಯೂಟರ್ ಹಾಗೂ ಪ್ರಿಂಟರ್ ಕೂಡ ವಶಕ್ಕೆ ಪಡೆಯಲಾಗಿದೆ. ಕಳ್ಳತನ ಮಾತ್ರವಲ್ಲದೆ ಇವರು ಕೇರಳದ ಹೈಟೆಕ್ ವೇಶ್ಯವಾಟಿಕೆ ದಂಧೆಯಲ್ಲೂ ಪಾಲ್ಗೊಂಡಿದ್ದು, ಅದಕ್ಕೆ ಸಂಬಂಧಿಸಿದ ಕೇಸ್​ನಿಂದ ತಲೆಮರೆಸಿಕೊಂಡಿದ್ದರು. ರತ್ನ ಇತ್ಯಾದಿ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ನಾನು ಟೈಟಾಗಿದ್ದೇನೆ ಗೊತ್ತಾಗಿಲ್ಲ, ಇನ್ನೊಂದು ಕಾರ್ಡ್ ನಂಬರ್ ಕೊಡಿ ಎಂದ; 730 ರೂಪಾಯಿ ವೈನ್‌ಗೆ 1.79 ಲಕ್ಷ ರೂ. ಧೋಖಾ

ಫ್ರೀ ಕೊಟ್ರೂ ಊಟ-ತಿಂಡಿ-ನೀರು ಏನೂ ಬೇಡ ಎಂದು ಹೇಳಿ ಸಿಕ್ಕಿಬಿದ್ದ ಸ್ಮಗ್ಲರ್; ಹೊಟ್ಟೆಯಲ್ಲಿತ್ತು 11 ಕೋಟಿ ರೂ. ಮೌಲ್ಯದ ಡ್ರಗ್ಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 5 =
Remember me
