ಬೆಂಗಳೂರು:ಕೋವಿಡ್-19 ಕರ್ತವ್ಯನಿರತ ಇನ್​ಸ್ಪೆಕ್ಟರ್ ಜತೆಅಸಭ್ಯವಾಗಿ ವರ್ತಿಸಿದ ಇಬ್ಬರು ಯುವತಿಯರನ್ನು ಜೀವನ್ ಬಿಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿವೇಕನಗರದ ಮಧುಮಿತಾ ನಟರಾಜನ್(29) ಮತ್ತು ಥಣಿಸಂದ್ರದ ಶಕ್ತಿ ನಾಯರ್(33) ಬಂಧಿತರು. ಜೀವನ್ ಬಿಮಾ ನಗರ ಸಂಚಾರ ಠಾಣೆ ಇನ್​ಸ್ಪೆಕ್ಟರ್ ಮತ್ತು ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿ ಮತ್ತು ಕೋವಿಡ್-19 ಪಾಸ್ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 19ರ ಬೆಳಗ್ಗೆ ಸಿವಿಲ್ ಮತ್ತು ಸಂಚಾರ ಠಾಣೆಗಳು ಇನ್​ಸ್ಪೆಕ್ಟರ್​ಗಳು ಮತ್ತು ಸಿಬ್ಬಂದಿ ಎಚ್​ಎಎಲ್ ರಸ್ತೆಯ ಡೈಮಂಡ್ ಡಿಸ್ಟ್ರಿಕ್ಟ್ ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಳಗ್ಗೆ 11.40ರಲ್ಲಿ ದೊಮ್ಮಲೂರು ರಸ್ತೆ ಮುಖಾಂತರ ಸ್ಪಿಪ್ಟ್ ಕಾರಿನಲ್ಲಿ ವೇಗವಾಗಿ ಬಂದಿದ್ದು, ಪೊಲೀಸ್ ಚೆಕ್​ಫೋಸ್ಟ್ ಸಿಬ್ಬಂದಿ ಕೈ ಅಡ್ಡಿ ಹಾಕಿದ್ದಾರೆ. ನಿಲ್ಲಿಸುವ ಸೋಗಿನಲ್ಲಿ ಬಂದು ಮತ್ತೆ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಅನುಮಾನ ಬಂದ ಜೆ.ಬಿ.ನಗರ ಇನ್​ಸ್ಪೆಕ್ಟರ್, ಬೈಕ್​ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ ಪಾಸ್ ದುರುಪಯೋಗ ಪಡಿಸಿಕೊಂಡು ವಿನಾಕಾರಣ ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಇದನ್ನು ಪಶ್ನಿಸಿದ ಇನ್​ಸ್ಪೆಕ್ಟರ್ ಮತ್ತು ಸಿಬ್ಬಂದಿ ಮೇಲೆ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಯುವತಿಯರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆಯಲಾಗಿದೆ. ಪತ್ರಿಕೋದ್ಯಮದಲ್ಲಿ ಮಧುಮಿತಾ ನಟರಾಜನ್ ಕೆಲಸ ಹಾಗೂ ಶಕ್ತಿ ನಾಯರ್ ಹಾಸ್ಪಿಲಿಟಿ ಉದ್ಯಮ ನಡೆಸುತ್ತಿದ್ದಾರೆ. ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ರವಾನಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಜತೆ ಸಹಕರಿಸಿ:ಕರೊನಾ ಸೋಂಕಿನಿಂದ ಜನರನ್ನು ರಕ್ಷಣೆ ಮಾಡುವ ಉದ್ದೇಶಕ್ಕೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ. ಎಲ್ಲರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಿರುವ ಪೊಲೀಸರ ಜತೆ ವಿನಾಕಾರಣ ಜಗಳ ಮಾಡುವುದು ಹಾಗೂ ತುರ್ತು ಕಾರ್ಯಕ್ಕೆ ಪಡೆದಿರುವ ಪಾಸ್​ಗಳನ್ನು ದುರುಪಯೋಗ ಪಡಿಸಿಕೊಳ್ಳದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 3 =
Remember me
