ಶಿವಮೊಗ್ಗ:ಬೈಪಾಸ್ ರಸ್ತೆಯ ಊರುಗಡೂರಿನಲ್ಲಿ ಬುಧವಾರ ಬೆಳಗ್ಗೆ ಕಟ್ಟಡ ಕಾಮಗಾರಿ ವೇಳೆ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶ ಗುಂಟೂರಿನ ನಿವಾಸಿ ಚಲ್ಲನ ಸೋಮಶೇಖರ್ (35)ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಕಾರ್ಮಿಕನ ಗುರುತು ಪತ್ತೆಯಾಗಿಲ್ಲ. ಊರುಗಡೂರಿನ ಡಾ. ಅಂಬೇಡ್ಕರ್ ಭವನದ ಎದುರು ಗಂಗಾಧರ್ ಎಂಬುವರಿಗೆ ಸೇರಿದ ವಾಣಿಜ್ಯ ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಈ ಕಟ್ಟಡದ ಮೂರನೇ ಮಹಡಿಯಲ್ಲಿ ಕೆಲಸಕ್ಕಾಗಿ ಬುಧವಾರ ಹೊಳೆ ಬಸ್ ನಿಲ್ದಾಣದ ಬಳಿಯಿಂದ ಸೋಮಶೇಖರ್ ಮತ್ತು ಇಬ್ಬರನ್ನು ಮಾಲೀಕ ಗಂಗಾಧರ್ ಕರೆದೊದ್ದಿದ್ದರು.
ಇದನ್ನೂ ಓದಿ:ನಾಸಾ ಹೊಸ ಮೈಲಿಗಲ್ಲು; ಮೂತ್ರ, ಬೆವರಿನಿಂದ ಕುಡಿಯುವ ನೀರು ಉತ್ಪಾದನೆ!
ಕೆಲಸ ಮಾಡುತ್ತಿದ್ದ ವೇಳೆ ತಗಡಿನ ಶೀಟ್‌ಗಳನ್ನು ಕೆಳಗಿನಿಂದ ಮೇಲೆ ಎತ್ತಿಕೊಳ್ಳುವಾಗ ವಿದ್ಯುತ್ ತಂತಿಗೆ ತಗುಲಿ ಅವಘಡ ಸಂಭವಿಸಿದೆ. ಕಟ್ಟಡಕ್ಕೂ ಮತ್ತು 11 ಕೆವಿ ತಂತಿಗೂ ಎರಡು ಅಡಿ ಅಂತರವಿದ್ದು, ಯಾವುದೇ ಮುಂಜಾಗ್ರತೆ ವಹಿಸಿರಲಿಲ್ಲ ಎನ್ನಲಾಗಿದೆ.
ಮತ್ತೊಬ್ಬ ಕಾರ್ಮಿಕನ ಗುರುತು ಪತ್ತೆಯಾಗಿಲ್ಲ. ಎರಡೂ ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಪ್ರಕರಣ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ವಿಶ್ವ ಕನ್ನಡಿಗ 2023 ಪ್ರಶಸ್ತಿ” ಸ್ವೀಕರಿಸಿದ ಡಿವೈನ್​ ಸ್ಟಾರ್​ ರಿಷಬ್​​ ಶೆಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + six =
Remember me
