ಬೆಂಗಳೂರು:ಭೀಕರ ಪ್ರವಾಹದಿಂದ ನೆಲಕಚ್ಚಿದ್ದ ರಾಜ್ಯದ ಆರ್ಥಿಕತೆ ಚೇತರಿಸಿಕೊಳ್ಳುವ ಮೊದಲೇ ಕರೊನಾ ಮಾರಿ ವಕ್ಕರಿಸಿದೆ. ಈ ಪರಿಣಾಮ ಮುಂದಿನ ಎರಡು ವರ್ಷ ಅಭಿವೃದ್ಧಿಯನ್ನೇ ಮರೆಯಬೇಕಾದ ಪರಿಸ್ಥಿತಿ ಎದುರಾಗಿದೆ.
ಪ್ರವಾಹದಿಂದ ಸುಮಾರು 38 ಸಾವಿರ ಕೋಟಿ ರೂ.ನಷ್ಟವಾದ ಹಿನ್ನೆಲೆಯಲ್ಲಿ ಸರ್ಕಾರ ಇಲಾಖೆಗಳ ಅನುದಾನ ಕಡಿತ ಮಾಡಿ ಪರಿಹಾರ ಕಾರ್ಯ ಕೈಗೊಂಡಿತ್ತು. ಜಿಎಸ್​ಟಿ ಪಾಲು, ಪರಿಹಾರ, 15ನೇ ಹಣಕಾಸು ಆಯೋಗದಿಂದಾಗುವ ನಷ್ಟಗಳ ಅಂದಾಜಿನ ನಡುವೆಯೇ ಮುಂದಿನ ಹಣಕಾಸು ವರ್ಷದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಸಜ್ಜಾಗುವುದರೊಳಗೆ ಕರೊನಾಗೆ ಇಡೀ ರಾಜ್ಯ ಸ್ತಬ್ಧವಾಗಿದೆ. ಇದರಿಂದಾಗುವ ನಷ್ಟವೆಷ್ಟು ಎಂಬುದು ಅಂದಾಜಿಗೂ ಸಿಗದಾಗಿದೆ.
ಜಿಎಸ್​ಟಿ ಪರಿಹಾರ 2021- 22ಕ್ಕೆ ನಿಂತ ನಂತರ ಕೇಂದ್ರದ ಪಾಲು ಕಡಿಮೆಯಾಗಿ ಅಭಿವೃದ್ಧಿಗೆ ಪರ ದಾಡಬೇಕಾಗುತ್ತದೆ. ಅಲ್ಲಿಯ ವರೆಗೆ ತೊಂದರೆಯಾಗ ದೆಂಬ ನಿರೀಕ್ಷೆ ಇತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಆ 2 ವರ್ಷವೂ ಅಭಿವೃದ್ಧಿ ಕಷ್ಟ ಎನ್ನಲಾಗಿದೆ. ತೆರಿಗೆ ಸಂಗ್ರಹ, ಸಮತೋಲಿತ ಖರ್ಚಿನ ಆಧಾರದ ಮೇಲೆ ರಾಜ್ಯದ ಅಭಿವೃದ್ಧಿ ನಿಂತಿರುತ್ತದೆ. ಕರೊನಾ ನಿಯಂತ್ರಣಕ್ಕೆ ಬಂದ ಮೇಲೂ ಆರ್ಥಿಕತೆ ಚೇತರಿಕೆಗೆ ಎಷ್ಟು ಕಾಲ ಬೇಕೆಂಬುದನ್ನು ಹೇಳಲಾಗದೆಂಬುದು ಆರ್ಥಿಕ ಇಲಾಖೆ ಅಂಬೋಣ.
ಸಂಬಳಕ್ಕಷ್ಟೇ ಸಾಕು:ಸರ್ಕಾರದ ಬದ್ಧವೆಚ್ಚಗಳೇ ಶೇ.80ರ ಗಡಿ ದಾಟಿವೆ. ವ್ಯಾಪಾರ, ವಹಿವಾಟು ಚೇತರಿಕೆ ನಂತರವಷ್ಟೇ ಆರ್ಥಿಕ ಸ್ಥಿತಿ ಸುಧಾರಣೆಯಾಗಬೇಕಾದ್ದರಿಂದ ವೇತನ, ನಿವೃತ್ತಿ ವೇತನ ಹಾಗೂ ಸಬ್ಸಿಡಿ ಆಧಾರಿತ ಕಾರ್ಯಕ್ರಮಗಳ ಜಾರಿ ಮಾಡಿಕೊಂಡಿರುವುದು ಕಷ್ಟವಾಗಬಹುದೆಂಬ ಪರಿಸ್ಥಿತಿ ಇದೆ. ಪ್ರಸಕ್ತ ಸಾಲಿನಲ್ಲಿ ವೇತನಕ್ಕೆ 39,399 ಕೋಟಿ ರೂ., ನಿವೃತ್ತಿ ವೇತನಕ್ಕೆ 24,210 ಕೋಟಿ ರೂ. ಸೇರಿ ಒಟ್ಟಾರೆ 63,609 ಕೋಟಿ ರೂ.ಅಗತ್ಯವಿದೆ. ಇದರ ಜತೆಗೆ ಸಹಾಯಧನ ಆಧಾರಿತ ಯೋಜನೆಗಳಿಗೆ 23,475 ಕೋಟಿ ರೂ.ಬೇಕಾಗುತ್ತದೆ. ಜತೆಗೆ ಇತರ ಬದ್ಧವೆಚ್ಚಗಳಿವೆ. ರಾಜ್ಯದಲ್ಲಿ ತೆರಿಗೆ ಸಂಗ್ರಹ ಕುಸಿತವಾಗಿರುವುದು ಮತ್ತು ಕೇಂದ್ರದ ಪಾಲು ಕಡಿಮೆಯಾದ್ದರಿಂದ ಸಂಬಳವನ್ನು ಮಾತ್ರ ಕೊಟ್ಟುಕೊಂಡಿರಬೇಕಾದ ಸ್ಥಿತಿ ಬರಬಹುದು ಅಥವಾ ಅದೂ ಕೈ ಮೀರಬಹುದೆಂಬುದು ಸರ್ಕಾರದ ಆತಂಕ ಎಂಬುದಾಗಿ ಹೆಸರು ಬಹಿರಂಗಕ್ಕೆ ಒಪ್ಪದ ಹಿರಿಯ ಸಚಿವರೊಬ್ಬರು ಹೇಳುತ್ತಾರೆ.
ಅಭಿವೃದ್ಧಿಗೆ ಉಳಿಕೆ ಕಡಿಮೆ
ಬಂಡವಾಳ ವೆಚ್ಚಕ್ಕೆ ಉಳಿಯುತ್ತಿದ್ದ ಮೊತ್ತ 42,916 ಕೋಟಿ ರೂ.ಮಾತ್ರ. ಆದರೆ ಸದ್ಯದ ಮಟ್ಟಿಗೆ ಅಷ್ಟು ಮೊತ್ತ ವೆಚ್ಚ ಮಾಡಲಾಗುವುದೋ ಇಲ್ಲವೋ ಎಂಬ ಪ್ರಶ್ನೆ ಅಧಿಕಾರಿಗಳಲ್ಲಿದೆ. ಬಂಡವಾಳ ವೆಚ್ಚ ಶೇ. 2.8 ರಿಂದ ಶೇ. 2.3ಕ್ಕೆ ಇಳಿದಿದೆ. ಮುಂದಿನ ವರ್ಷ ಇನ್ನಷ್ಟು ಕಡಿಮೆಯಾಗಲಿದೆ ಎಂದೇ ಅಂದಾಜಿಸಲಾಗುತ್ತಿದೆ.
ಹೆಚ್ಚುವ ವಿತ್ತೀಯ ಕೊರತೆ
ವಿತ್ತೀಯ ಹೊಣೆಗಾರಿಕೆ ಕಾಯ್ದೆ ಪ್ರಕಾರ ವಿತ್ತೀಯ ಕೊರತೆ ಜಿಎಸ್​ಡಿಪಿಯ ಶೇ.3ನ್ನು ಮೀರುವಂತಿಲ್ಲ. 38,752 ಕೋಟಿ ರೂ.ಗಳಿರುವ ಕೊರತೆ ಅಂದಾಜು 50 ಸಾವಿರ ಕೋಟಿ ರೂ.ದಾಟಿ ಜಿಎಸ್​ಡಿಪಿಯ ಶೇ. 3.2ಕ್ಕೂ ಹೋದರೂ ಅಚ್ಚರಿ ಇಲ್ಲ ಎನ್ನಲಾಗಿದೆ.
ತೆರಿಗೆ ಎಷ್ಟು ಕುಂಠಿತ
ಮರುಪಾವತಿ ಮುಂದಕ್ಕೆ
ರಾಜ್ಯ ಸರ್ಕಾರದ ಮೇಲಿನ ಹೊಣೆಗಾರಿಕೆ 4,27,059 ಕೋಟಿ ರೂ.ಗೆ ತಲುಪಲಿದೆ. ಬಡ್ಡಿಗೆ 25,623 ಕೋಟಿ ರೂ. ಬೇಕು. ಸದ್ಯದ ಮಟ್ಟಿಗೆ ಸಾಲ ಮರುಪಾವತಿ ಸಹ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ. ಆದರೆ ಇದರಿಂದ ಮುಂದೆ ಸಾಲದ ಹೊರೆ ಒಮ್ಮೆಗೇ ಹೆಚ್ಚಾಗಲಿದೆ.
ಅಬಕಾರಿ ಇಲಾಖೆಗೆ -ಠಿ;1,200 ಕೋಟಿ ನಷ್ಟ
ಬೆಂಗಳೂರು: ರಾಜಸ್ವಕ್ಕೆ ಹೆಚ್ಚು ಆದಾಯ ತಂದುಕೊಡುವ ಅಬಕಾರಿ ಇಲಾಖೆಗೆ ಜನತಾ ಕರ್ಫ್ಯೂನಿಂದಾಗಿ ಬರೋಬ್ಬರಿ 1,200 ಕೋಟಿ ರೂ. ಆದಾಯ ಖೋತಾ ಆಗಿದೆ. ರಾಜ್ಯದಲ್ಲಿ ಒಟ್ಟು 10,188 ಮದ್ಯದಂಗಡಿಗಳಿದ್ದು, ಪ್ರತಿನಿತ್ಯ 1.8 ಲಕ್ಷ ಮದ್ಯ ಬಾಕ್ಸ್​ಗಳ ಮಾರಾಟದಿಂದ 55ರಿಂದ 60 ಕೋಟಿ ರೂ.ಆದಾಯ ಬರುತ್ತಿತ್ತು. ಆದರೆ, ಸರ್ಕಾರ ಮದ್ಯದಂಗಡಿಗಳನ್ನು ಬಂದ್ ಮಾಡಿದ್ದರಿಂದ ಇಲಾಖೆಗೆ ಆರ್ಥಿಕ ಹೊಡೆತ ಬಿದ್ದಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2019-20ನೇ ಸಾಲಿನಲ್ಲಿ 20,950 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನೀಡಲಾಗಿತ್ತು. 2020ರ ಮಾ.15ರವರೆಗೆ ಆಂದಾಜು 20,500 ಕೋಟಿ ರೂ. ಸಂಗ್ರಹವಾಗಿತ್ತು. ಉಳಿದ ಸಂಗ್ರಹಣೆಗೆ ಕರೊನಾ ಅಡ್ಡಿಯಾಗಿದೆ. ಇದೇ ಮೊದಲ ಬಾರಿ ಸರ್ಕಾರ ನೀಡಿದ್ದ ರಾಜಸ್ವ ಗುರಿಯನ್ನು ಮುಟ್ಟಲಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಕೆಲ ಮದ್ಯದಂಗಡಿಗಳ ಪರವಾನಗಿಯನ್ನು ಇಲಾಖೆ ಅಮಾನತು ಮಾಡಿದೆ. ಬೆಂಗಳೂರಲ್ಲೇ ಐದು ಅಂಗಡಿಗಳನ್ನು ಅಮಾನತು ಮಾಡಲಾಗಿದೆ.
| ರುದ್ರಣ್ಣ ಹರ್ತಿಕೋಟೆ
ಕೋವಿಡ್ 19ನಿಂದ ಆರ್ಥಿಕ ಹಿಂಜರಿತ, ತಡೆಯುವ ಬಗೆ ತಿಳಿಯದೆ ಜರ್ಮನಿ ವಿತ್ತ ಸಚಿವ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
