ಅಜ್ಜಮಾಡ ರಮೇಶ್ ಕುಟ್ಟಪ್ಪ
ಮಡಿಕೇರಿ:ಇದು ಸರ್ಕಾರಿ ಕೆಲಸಕ್ಕೆ ಪೈಸಾರಿ ಜಾಗ ಮಂಜೂರು ಮಾಡಿಸಲು ಅರಣ್ಯ ಇಲಾಖೆ ಎರಡು ವರ್ಷದಿಂದ ಸತಾಯಿಸುತ್ತಿರುವ ವಿಶೇಷ ಪ್ರಕರಣ. ಸೋಮವಾರಪೇಟೆ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತೋಳೂರು ಗ್ರಾಮದಲ್ಲಿ ಮುರಾರ್ಜಿ ದೇಸಾಯಿ ವಸತಿ ನಿಲಯ ಸ್ಥಾಪಿಸಲು ಅರಣ್ಯ ಇಲಾಖೆಯ ನಿರಾಪೇಕ್ಷಣಾ ಪತ್ರ (ಎನ್ಒಸಿ) ಗಾಗಿ ಗ್ರಾಮಸ್ಥರು ಅಲೆದಾಡುತ್ತಿದ್ದಾರೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಮಂಜುನಾಥ್ ಅವರು ಇದ್ದಾಗ ಅವರನ್ನು ಗ್ರಾಮಸ್ಥರು ಸಾಕಷ್ಟು ಸಲ ಭೇಟಿ ಮಾಡಿದ್ದರು. ಅವರು ಅಮಾನತುಗೊಂಡು ನಿರ್ಗಮಿಸಿದ ಮೇಲೆ ಹಾಲಿ ಡಿಸಿಎಫ್ ಪ್ರಭಾಕರನ್ ಬೆನ್ನುಹತ್ತಿದ್ದಾರೆ. ತಮ್ಮೂರಿನ ಹಿತಾಸಕ್ತಿಯಿಂದ ಎನ್ಒಸಿಗಾಗಿ ಅಂಗಲಾಚುತ್ತಿದ್ದಾರೆ. ನಾನು ಖುದ್ದು ಸ್ಥಳ ಪರಿಶೀಲನೆ ನಡೆಸಿದ ಬಳಿಕ ವಿಲೇವಾರಿ ಮಾಡುತ್ತೇನೆ ಎಂದು ಡಿಸಿಎಫ್ ಭರವಸೆ ನೀಡುತ್ತಿದ್ದಾರೆ. ಆದರೆ, ಊರಿಗೆ ಬರುತ್ತಿಲ್ಲ ಎಂದು ಗ್ರಾಮಸ್ಥರು ಅತೃಪ್ತಿ ವ್ಯಕ್ತ ಪಡಿಸುತ್ತಿದ್ದಾರೆ.
ಸರ್ಕಾರಿ ಜಾಗ ಬಿಸಿಎಂ ಇಲಾಖಾಧಿಕಾರಿ ಹೆಸರಿಗೆ ಕಾಯ್ದಿರಿಸಲು ಅರಣ್ಯ ಇಲಾಖೆ ಅಧಿಕಾರಿ ಹೆಸರಿಗೆ ಕಾಯ್ದಿರಿಸಲು ಅರಣ್ಯ ಇಲಾಖೆ ಅಭಿಪ್ರಾಯ ಕೇಳಿ 18-2-2017 ರಲ್ಲಿ ಸೋಮವಾರಪೇಟೆ ತಹಸೀಲ್ದಾರ್, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಲಿಖಿತ ಪತ್ರ ಕಳುಹಿಸಿದ್ದರು. ಜಿಪಿಎಸ್ ರೀಡಿಂಗ್ ನೊಂದಿಗೆ ಸಲ್ಲಿಸಿರುವ ನಕಾಶೆ ದೃಢೀಕರಿಸಿ ಎಸಿಎಫ್ಗೆ ವರದಿ ಮಾಡುವಂತೆ 20-4-2019 ರಂದು ಡಿಸಿಎಫ್, ಸೋಮವಾರಪೇಟೆ ಆರ್ ಎಫ್ ಒ ಸೂಚನೆ ನೀಡಿದ್ದರು. ಆರ್ ಎಫ್ ಒ, ಎಸಿಎಫ್್ ತಮ್ಮ ಪಾಲಿನ ಕರ್ತವ್ಯ ಪೂರ್ಣಗೊಳಿಸಿದ್ದು, ಡಿಸಿಎಫ್ ಕಚೇರಿಯಲ್ಲಿ ಕಡತ ವಿಲೇವಾರಿ ಆಗದೆ ಉಳಿದುಕೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 10 =
Remember me
