ಬಳ್ಳಾರಿ:ಇವರಿಬ್ಬರ ಹೆಸರೂ ಒಂದೇ.. ಒಬ್ಬ ಆ ಕಡೆಯಿಂದ ಬೈಕ್​ನಲ್ಲಿ, ಇನ್ನೊಬ್ಬ ಈ ಕಡೆಯಿಂದ ಬೈಕ್​ನಲ್ಲೇ ಬರುತ್ತಿದ್ದ. ಇಬ್ಬರ ಬೈಕ್​ ಪರಸ್ಪರ ಡಿಕ್ಕಿಯಾಗಿದೆ. ಅಚ್ಚರಿ ಎಂದರೆ ಅಪಘಾತದ ತೀವ್ರತೆಗೆ ಇಬ್ಬರ ತಲೆಗೂ ಪೆಟ್ಟಾಗಿದೆ. ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಇಬ್ಬರೂ ಅಲ್ಲಿ ಸಾವಿಗೀಡಾಗಿದ್ದಾರೆ. ಇಂಥದ್ದೊಂದು ಭೀಕರ ಅಪಘಾತ ಬಳ್ಳಾರಿ ಜಿಲ್ಲೆಯಲ್ಲಿ ಇಂದು ಸಂಭವಿಸಿದೆ.
ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಉಪ್ಪಾರ ಹೊಸಹಳ್ಳಿ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ತೆಕ್ಕಲಕೋಟೆ ಗ್ರಾಮದ ವೀರೇಶ್ (19), ಬಲಕುಂದಿ ಗ್ರಾಮದ ವೀರೇಶ್ (23) ಸಾವಿಗೀಡಾದ ಬೈಕ್​ಸವಾರರು.
ಒಬ್ಬ ವೀರೇಶ್ ಬಲಕುಂದಿಯಿಂದ ತೆಕ್ಕಲಕೋಟೆಗೆ ಬೈಕ್​ನಲ್ಲಿ ಹೋಗುತ್ತಿದ್ದು, ಇನ್ನೊಬ್ಬ ವೀರೇಶ್​ ತೆಕ್ಕಲಕೋಟೆಯಿಂದ ಬೈಕ್​ನಲ್ಲಿ ಬರುತ್ತಿರುವಾಗ ಎರಡೂ ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮವಾಗಿ ಇಬ್ಬರ ತಲೆಗೂ ಗಂಭೀರ ಗಾಯವಾಗಿದ್ದು, ಅವರನ್ನು ವಿಮ್ಸ್​ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವಿಗೀಡಾಗಿದ್ದಾರೆ. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗಳ ಮನೆಯಿಂದ ವಾಪಸ್ ಹೊರಟಿದ್ದ ತಾಯಿ-ಮಗ ಇಬ್ಬರೂ ಮಾರ್ಗಮಧ್ಯೆ ಸಾವು!
ಮಗಳನ್ನು ಅಮೆರಿಕಕ್ಕೆ ಕಳಿಸಿ ಮರಳುತ್ತಿದ್ದ ದಂಪತಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − four =
Remember me
