ಹುಬ್ಬಳ್ಳಿ:ಟೈ ಹುಬ್ಬಳ್ಳಿ ಆಯೋಜಿಸಿದ ಯುವ ಟೈಕಾನ್-2021ರ ಸಮ್ಮೇಳನವನ್ನು ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಸಂಕೇಶ್ವರ ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿದರು.
ನವೋದ್ಯಮಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ  ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗಿದೆ. ಸಾವಿರಾರು ನವೋದ್ಯಮಿಗಳಿಗೆ ಈ ಕಾರ್ಯಕ್ರಮ ಪ್ರೋತ್ಸಾಹ ನೀಡುತ್ತ ಬಂದಿದೆ.
ಆದರೆ ಈ ಬಾರಿ  ಕರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಬಹಿರಂಗ ಸಮಾವೇಶ ಮಾಡದೇ ವರ್ಚುವಲ್ ಮೂಲಕ ಟೈ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು‌.

ಆನ್​ಲೈ​ನ್ ಸಮಾವೇಶಕ್ಕೆ 7500 ಜನ ನೋಂದಣಿ ಮಾಡಿಕೊಂಡು ದೇಶದ ಮೂಲೆ ಮೂಲೆಯಿಂದ ಭಾಗಿಯಾಗಿದ್ದರು. ಹೊಸದಾಗಿ ಉದ್ಯಮ ಆರಂಭಿಸೋರಿಗೆ ಮತ್ತು ಆರಂಭಕ್ಕೆ ತಯಾರಿ ನಡೆಸುತ್ತಿರುವ ನವೋದ್ಯಮಿಗಳಿಗೆ, ಪರಿಣತ ಹಾಗೂ ಸಾಹಸೋದ್ಯಮಿಗಳು ಆನ್ ಲೈನ್ ಮೂಲಕವೇ ಒಂದಷ್ಟು ಕಿವಿಮಾತು ಹೇಳಿದರು.
‘ಯೂ ಅನ್ ಲಿಮಿಟೆಡ್’ ವಿಷಯವಾಗಿ ಖ್ಯಾತ ಸಲಹೆಗಾರ್ತಿ ಡಾ. ವುಷಿ ಮೋಹನದಾಸ್, ‘ಆತ್ಮನಿರ್ಭರ’ ಯೋಜನೆಯ ಬಗ್ಗೆ ಉದ್ಯಮಿ ಅನುಮೋಲ್ ಗೋರ್ಗ್, ‘ಉತ್ತರ ಕರ್ನಾಟಕದಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ಡಾ. ಗುರುರಾಜ್ ದೇಶಪಾಂಡೆ ಹಾಗೂ ‘ಲಡಾಕ್ ನ ಹಸಿರೀಕರಣ ಮತ್ತು ಆಧುನಿಕ ಶಿಕ್ಷಣ ನೀತಿ’ ಕುರಿತಾಗಿ ಸೀನಮ್ ವಾಂಗ್ಶುಕ ಅವರು ಯುವ ಉದ್ಯಮಿಗಳನ್ನುದ್ದೇಶಿಸಿ ಮಾತನಾಡಿದರು.
ಟೈ ಹುಬ್ಬಳ್ಳಿ ಅಧ್ಯಕ್ಷ ಅಜಯ ಹಂಡಾ, ಟೈಕಾನ್ ಸಂಚಾಲಕ ವಿಜಯ ಮಾನೆ, ಟೈ ನಿರ್ಗಮಿತ ಅಧ್ಯಕ್ಷಸಂದೀಪ ಬಿಡಸಾರಿಯಾ, ದೇಶಪಾಂಡೆ ಫೌಂಡೇಷನ್ ಸಿಇಓ ವಿವೇಕ ಪವಾರ ವರ್ಚುವಲ್ ವೇದಿಕೆಯಲ್ಲಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − eleven =
Remember me
